ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ 25 ಜೋಡಿಗಳು

Last Updated 13 ಮೇ 2017, 9:14 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಆಡೂರಿನ ಮಾಲತೇಶ ದೇವಸ್ಥಾನದ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಯಿನಾಥ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವ ಧರ್ಮ ಸಾಮೂಹಿಕ ವಿವಾಹದಲ್ಲಿ 25 ಜೋಡಿ ವಧು–ವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಿಂಗಪ್ಪ ಪೂಜಾರ, ‘ಬದುಕಿನಲ್ಲಿ ಸರಳತೆ ಉಸಿರಾಗಬೇಕಿದೆ. ಅನವಶ್ಯಕ ದುಂದುವೆಚ್ಚಕ್ಕೆ ಮುಂದಾಗುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶದ ಸಾಕಷ್ಟು ಸಂಖ್ಯೆಯ ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಕುಟುಂಬಗಳು ತೊಂದರೆಗೆ ಸಿಲುಕುತ್ತಿವೆ. ಇನ್ನೊಬ್ಬರನ್ನು ನೋಡಿ ಜೀವಿಸುವ ಖಯಾಲಿ ಬದುಕಿಗೆ ಮಾರಕ’ ಎಂದು ಎಚ್ಚರಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್.ಬಿ.ಪೂಜಾರ, ತಾಲ್ಲೂಕ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗಪ್ಪ ಪೋಲೇಸಿ, ಪ್ರಮುಖರಾದ ಚಂದ್ರಣ್ಣ ನಿಕ್ಕಂ, ವಸಂತ ಕುಲಕರ್ಣಿ, ಬಸಪ್ಪ ಗುಂಡಿ, ಬಸಪ್ಪ ಗಿಡ್ಡನಗೌಡ್ರ, ಸಿದ್ದರಾಮಗೌಡ ಪಾಟೀಲ, ಮಾರುತಿ ಖಂಡೂನವರ, ಮಾರುತಿ ನಿಕ್ಕಂ, ತೇಜಪ್ಪ ಪೂಜಾರ, ಎಂ.ಎಸ್.ಶಂಕ್ರಿಕೊಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT