ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುರೇಕುಪ್ಪದಲ್ಲಿ ಬಳ್ಳಾರಿ ಕುರಿ ತಳಿ ಅಭಿವೃದ್ಧಿ ಕೇಂದ್ರ ಸ್ಥಾಪನೆ’

Last Updated 13 ಮೇ 2017, 9:56 IST
ಅಕ್ಷರ ಗಾತ್ರ

ಕಂಪ್ಲಿ: ಸಂಡೂರು ತಾಲ್ಲೂಕು ಕುರೇಕುಪ್ಪ ಗ್ರಾಮದ ಕುರಿ ಫಾರಂ 200ಎಕರೆ ಪ್ರದೇಶ ದಲ್ಲಿ ‘ಬಳ್ಳಾರಿ ಕುರಿ ತಳಿ ಅಭಿವೃದ್ಧಿ ಕೇಂದ್ರ’ ಪ್ರಸಕ್ತ ವರ್ಷ ಆರಂಭಿಸಲಾಗುವುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ. ಕೃಷ್ಣ ತಿಳಿಸಿದರು.

ಇಲ್ಲಿಯ ಪಶು ಚಿಕಿತ್ಸಾಲಯದ ಆವ ರಣದಲ್ಲಿ ಗುರುವಾರ ನಡೆದ ಕುರಿಗಾರ ರಿಗೆ ಪರಿಹಾರಧನ ಮತ್ತು ಜಂತು ನಾಶಕ ಔಷಧಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಹಾಲಿ ಕೇಂದ್ರದಲ್ಲಿ ಕುರಿ, ಮೇಕೆ ತರಬೇತಿ ಡಿಪ್ಲೋಮಾ ಕಾಲೇಜು ಆರಂಭಿಸುವ ಕುರಿತು ಚಿಂತನೆ ನಡೆಸಲಾ ಗುತ್ತಿದೆ ಎಂದು ಹೇಳಿದರು.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ನಿಗಮದಿಂದ ₹ 5ಲಕ್ಷ ನೀಡಲಾಗುತ್ತಿದೆ. ಒಂದು ಕುರಿ ಆಕಸ್ಮಿಕ ಮರಣ ಹೊಂದಿದರೆ ₹ 5,000 ಪರಿಹಾರ ಧನ ಹಾಗೂ ವರ್ಷಕ್ಕೆ ಮೂರು ಬಾರಿ ಉಚಿತ ಜಂತು ನಾಶಕ ಔಷಧಿ ವಿತರಿಸಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಕುರಿಗಾರರಿಗೆ ಮನವಿ ಮಾಡಿದರು.

ಪ್ರತಿ ಜಿಲ್ಲೆಗೆ ಐದು ಕುರಿಗಳ ಯಾಂತ್ರೀ ಕೃತ ಉಣ್ಣೆ ಕಟಾವು ಯಂತ್ರ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆಯಲ್ಲಿ ₹ 2.5ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಿಸಿ ಉಣ್ಣೆ ಸಂಗ್ರಹ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಹೊಸಪೇಟೆ ತಾಲ್ಲೂಕಿನಲ್ಲಿ ಆಕಸ್ಮಿಕ ಮೃತಪಟ್ಟ 320 ಕುರಿಗಳ 196 ಫಲಾನುಭವಿಗಳಿಗೆ ₹16ಲಕ್ಷ ಪರಿಹಾರ ಧನ ಮಂಜೂರು ಮಾಡಿದ ಆದೇಶ ಪತ್ರಗಳನ್ನು ಮತ್ತು ಕುರಿಗಳ ಜಂತು ನಾಶಕ ಔಷಧಗಳನ್ನು ಕುರಿಗಾರರಿಗೆ ಈ ಸಂದರ್ಭದಲ್ಲಿ ವಿತರಿಸಿದರು.

ದೇವಸಮುದ್ರ ಜಿ.ಪಂ ಸದಸ್ಯ ಕೆ. ಶ್ರೀನಿವಾಸರಾವ್, ತಾ.ಪಂ ಸದಸ್ಯ ಕೆ. ಷಣ್ಮುಖಪ್ಪ, ಹೊಸಪೇಟೆ ಪಶು ವೈದ್ಯ ಕೀಯ ಸಹಾಯಕ ನಿರ್ದೇಶಕ ಡಾ. ಬೆಣ್ಣೆ ಬಸವರಾಜ ಮಾತನಾಡಿದರು.
ಮೆಟ್ರಿ ಜಿ.ಪಂ ಸದಸ್ಯೆ ಎಂ. ವೆಂಕಟ ನಾರಮ್ಮ, ಪುರಸಭೆ ಸದಸ್ಯರಾದ ಎಂ. ಸುಧೀರ್, ಮರೆಣ್ಣ, ಎಪಿಎಂಸಿ ನಿರ್ದೇ ಶಕ ಗುಬಾಜಿ ನಾಗೇಂದ್ರಪ್ಪ, ಪಶು ಚಿಕಿ ತ್ಸಾಲಯದ ವೈದ್ಯಾಧಿಕಾರಿ ಡಾ.ಬಸವನ ಗೌಡ ಮತ್ತು ಸಿಬ್ಬಂದಿ, ಹೊಸಪೇಟೆ ತಾಲ್ಲೂಕು ಕುರಿಗಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT