ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ

Last Updated 17 ಮೇ 2017, 5:59 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆಲ್ಲ ಪರಿಹಾರ ಒದಗಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಶ್ಲಾಘಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಡಿಯುವ ನೀರಿಗೆ ಸಂಬಂಧಿ ಸಿದಂತೆ ದೂರುಗಳನ್ನು ಆಲಿಸಲು ಜಿಲ್ಲಾ ಪಂಚಾಯಿತಿಯಲ್ಲಿ ಪ್ರತ್ಯೇಕ ಘಟಕವಿದೆ. ಅದರಲ್ಲಿ 239 ದೂರುಗಳು ಸಲ್ಲಿಕೆಯಾಗಿದ್ದವು.
188 ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ 41 ಸಮಸ್ಯೆಗಳಲ್ಲಿ 12 ಸಮಸ್ಯೆಗಳು ಈಚೆಗೆ ಬಂದಿವೆ.

29 ಸಮಸ್ಯೆಗಳ ಪರಿಹಾರಕ್ಕೆ ಹಣಕಾಸಿನ ಅಗತ್ಯವಿದ್ದು ಹೊಸ ಕ್ರಿಯಾಯೋಜನೆ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌ ಮಾತು ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಶುದ್ಧ ನೀರಿನ ಘಟಕಗಳ ದುರಸ್ತಿ ಬಗ್ಗೆ ಬಹಳಷ್ಟು ದೂರುಗಳು ಮೊದಲು ಕೇಳಿ ಬರುತ್ತಿದ್ದವು. ‘ಕುಡಿಯುವ ನೀರಿನ ತುರ್ತು ಸೇವಾ ವಾಹನ’ ಆರಂಭಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 336 ಶುದ್ಧ ಕುಡಿ ಯುವ ನೀರಿನ ಘಟಕಗಳು ಕಾರ್ಯನಿ ರ್ವಹಿಸುತ್ತಿವೆ. ಏನಾದರೂ ತೊಂದ ರೆಗಳು ಕಾಣಿಸಿಕೊಂಡರೆ ತುರ್ತು ಸೇವಾ ವಾಹನವು ಕೂಡಲೇ ಅಲ್ಲಿಗೆ ತಲುಪಿ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಹೇಳಿದರು.

ಶ್ಲಾಘನೆಯ ಕೆಲಸ: ಜಿಲ್ಲೆಯಲ್ಲಿ ಧನಾತ್ಮಕ ದಿಕ್ಕಿನಲ್ಲಿ ಕೆಲಸಗಳು ನಡೆಯುತ್ತಿವೆ. ಆದರೆ ಇನ್ನಷ್ಟು ಹೆಚ್ಚಿನ ಕೆಲಸ ಮಾಡ ಬೇಕು ಎಂದು ಸಿಇಒ ಅವರಿಗೆ ಸೂಚಿ ಸಲಾಗಿದೆ. ನೀರಿನ ಮೂಲವಿಲ್ಲದ ಕಡೆಗ ಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬ ರಾಜು ಮಾಡಿ ಜನರಿಗೆ ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ. ಉದ್ಯೋಗ ಖಾತರಿ ಯೋಜನೆ ಕೂಡಾ ನಿರೀಕ್ಷೆ ಯಂತೆ ಅನುಷ್ಠಾನವಾಗುತ್ತಿದೆ. ಕುಡಿಯುವ ನೀರು ಒದಗಿಸಲು ಹಣ ಕಾಸಿನ ತೊಂದರೆ ಇಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT