ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ವಿತರಣೆಗೆ ರೈತರ ಆಗ್ರಹ

Last Updated 19 ಮೇ 2017, 6:22 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸಮಪರ್ಕವಾಗಿ ವಿತರಿಸಬೇಕು. ಬರ ಪರಿಹಾರ ಯೋಜನೆಯಡಿ ಕುಟುಂಬ ಗಳಿಗೆ ಪರಿಹಾರ ಸಿಗುವಂತೆ ಮಾಡ ಬೇಕೆಂದು ಆಗ್ರಹಿಸಿ ಕರ್ನಾಟ ಪ್ರಾಂತ್ಯ ರೈತ ಸಂಘದ  ರಾಜ್ಯ ಪ್ರತಿನಿಧಿ ವನಜಾ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ, ಅವರು ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು.  ಬರ ಪರಿಹಾರ ಯೋಜನೆಯಡಿ ಸರ್ಕಾರದಿಂದ  ಕೂಡಲೇ ಬರಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಸಮಪರ್ಕವಾಗಿ ಜಾನುವಾರುಗಳಿಗೆ ಮೇವು ವಿತರಣೆಯಾಗಬೇಕು ಎಂದು ಆಗ್ರಹಿಸಿದರು.

ನಾಗಶೆಟ್ಟಿಹಳ್ಳಿ ದಲಿತರಿಗೆ ರಕ್ಷಣೆ ಸಿಗಬೇಕು,ಸಾವನದುರ್ಗದ ದೇಗುಲಗಳಿಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ  ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸುಂಕ ವಸೂಲಿ ಮಾಡಿ ಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು.   ಅರಣ್ಯ ಇಲಾಖೆಗೆ ಸೇರಿರುವ ರಸ್ತೆಗೆ ಸುಂಕ ವಿಧಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ.ತಾಲ್ಲೂಕು ಪಂಚಾಯಿತಿ ಇಒ ಟಿ.ಮುರುಡಯ್ಯ ಹಂಚಿಕುಪ್ಪೆ ಗ್ರಾಮ ಪಂಚಾಯಿತಿಗೆ ನೋಟಿಸ್ ನೀಡಿ ಭಕ್ತರಿಂದ ವಸೂಲು ಮಾಡಿರುವ ಸುಂಕದ ಹಣವನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ವನಜಾ  ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಮಾತನಾಡಿ,  ಅರಣ್ಯ ಇಲಾಖೆ ಅಧಿಕಾರಿಗಳು ಬ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಗ್ರಹಿಸಿದರು.

  ಗ್ರೇಡ್‌–2 ತಹಶೀಲ್ದಾರ್‌ ಸೂಲಯ್ಯ  ಅವರಿಗೆ ಮನಸಿ ಪತ್ರ ಸಲ್ಲಿಸಲಾಯಿತು, ಹನುಮಾಪುರ ಚಿಕ್ಕಣ್ಣ, ರೈತ ಸಂಘದ ಖಜಾಂಚಿ ಜಯ ಪ್ರಕಾಶ್, ಮುಖಂಡ ರಾದ ರಂಗಸ್ವಾಮಿ, ತಿಮ್ಮಯ್ಯ, ನಾರಾಯಣಷಸ್ವಾಮಿ, ಗೋವಿಂದ ರಾಜು, ವೀರಭದ್ರಯ್ಯ, ಮಾದಯ್ಯ, ನರಸಿಂಹಮೂರ್ತಿ ನರಸಿಂಹಯ್ಯ, ರುದ್ರಾಚಾರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT