ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸನ್ ರೌಹಾನಿ ಜಯಭೇರಿ

ಇರಾನ್ ಅಧ್ಯಕ್ಷೀಯ ಚುನಾವಣೆ: ಆರ್ಥಿಕ ಪ್ರಗತಿಗೆ ಕೈಗೊಂಡ ಕ್ರಮಕ್ಕೆ ಬೆಂಬಲ
Last Updated 20 ಮೇ 2017, 19:30 IST
ಅಕ್ಷರ ಗಾತ್ರ

ಟೆಹರಾನ್: ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸನ್ ರೌಹಾನಿ ಅವರು ಪುನರ್‌ ಆಯ್ಕೆಯಾಗಿದ್ದಾರೆ. ಎಂದು ಸರ್ಕಾರಿ ಸ್ವಾಮ್ಯದ ವಾಹಿನಿ ತಿಳಿಸಿದೆ.

‘ರೌಹಾನಿ ಅವರು ವಿದೇಶಗಳ ಜತೆ ಮೈತ್ರಿ ಸುಧಾರಣೆ ಹಾಗೂ ದೇಶದ ಆರ್ಥಿಕ ಪ್ರಗತಿಗೆ ಕೈಗೊಂಡ ಕ್ರಮಗಳನ್ನು ಮತದಾರರು ಬೆಂಬಲಿಸಿದ್ದಾರೆ’ ಎಂದು ಆಂತರಿಕ ಸಚಿವ ಅಬ್ದೊಲ್‌ರೆಜಾ ರಹಮಾನಿ ಫಝ್ಲಿ ಅವರು ಹೇಳಿದ್ದಾರೆ.

‘ಬುದ್ಧಿವಂತಿಕೆ ಹಾಗೂ ಭರವಸೆಯ ಪಥದಲ್ಲಿ ದೇಶವನ್ನು ಮುನ್ನಡೆಸಲು ಜನಮನ್ನಣೆ ಪಡೆದಿರುವ ರೌಹಾನಿ ಅವರನ್ನು ಅಭಿನಂದಿಸುತ್ತೇನೆ’ ಎಂದು ಉಪಾಧ್ಯಕ್ಷ ಇಶಾಕ್ ಜಹಾಂಗಿರಿ ಅವರು ಹೇಳಿಕೆ ನೀಡಿದ್ದಾರೆ.

ಸೌಮ್ಯ ಸಂಪ್ರದಾಯವಾದಿ (ಮಾಡರೇಟ್ಸ್) ನಾಯಕ ಎಂದು ಗುರುತಿಸಿಕೊಂಡಿರುವ ರೌಹಾನಿ ಅವರು 2015ರಲ್ಲಿ ವಿಶ್ವದ ಆರು ಪ್ರಭಾವಿ ದೇಶಗಳ ಜತೆ ಮಾಡಿಕೊಂಡ ಪರಮಾಣು ದಿಗ್ಬಂಧನ ತೆರವು ಒಪ್ಪಂದವು ಮೈಲಿಗಲ್ಲು ಎಂದೇ ಬಿಂಬಿತವಾಗಿದೆ.

ಸೌಮ್ಯ ಸಂಪ್ರದಾಯವಾದಿಗೆ ಮತ್ತೆ ಪಟ್ಟ
ಜಾಗತಿಕವಾಗಿ ಇರಾನ್‌ ಏಕಾಂಗಿತನವನ್ನು ಕೊನೆಗೊಳಿಸಿ, ಅಭಿವೃದ್ಧಿಯತ್ತ ಮುನ್ನಡೆಯುವಂತೆ ಸುಧಾರಣಾವಾದಿಗಳು ಹಾಗೂ ಸೌಮ್ಯ ಸಂಪ್ರದಾಯವಾದಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ರೌಹಾನಿ ಅವರು 2013ರ ಚುನಾವಣೆಯಲ್ಲಿ ಜಯ ಗಳಿಸಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದರು. 

2015ರಲ್ಲಿ ಅಮೆರಿಕ ನೇತೃತ್ವದ ಆರು ಪಾಶ್ಚಿಮಾತ್ಯ ದೇಶಗಳು ಇರಾನ್ ಮೇಲಿದ್ದ ಆರ್ಥಿಕ ಹಾಗೂ ಪರಮಾಣು ದಿಗ್ಬಂಧವನ್ನು ತೆಗೆದುಹಾಕಿದವು. ಇದರ ಪರಿಣಾಮ ಮಾತ್ರ ಅಗಾಧ.

ಇರಾನ್ ತೈಲೋತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿದವು. ತೈಲೋತ್ಪನ್ನಗಳ ದರ  ಗಣನೀಯವಾಗಿ ಇಳಿಕೆಯಾಯಿತು. ಬ್ಯಾಂಕ್‌ಗಳು ಮೊದಲ ಸ್ಥಿತಿಗೆ ಮರಳಿದವು. ಹಣವು ಹರಿಯಿತು. ಜನರಲ್ಲಿ ಹೊಸ ಆಶಾವಾದ ಮೂಡಿತು. ಇರಾನ್‌ನಲ್ಲಿ ನವೋದಯ ಶುರುವಾಗಿದ್ದು ಇಲ್ಲಿಂದಲೇ. ಇದರ ಹಿಂದಿದ್ದ ಶಕ್ತಿ ರೌಹಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT