ಸಂಸ್ಕೃತ ಬೆಳೆಸಲು ಸರ್ಕಾರ ಉದಾಸೀನ: ಪದ್ಮಾಶೇಖರ್‌ ಬೇಸರ

‘ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ’

ರಾಜ್ಯದಲ್ಲಿನ ಮಠಗಳಿಂದ ಸಂಸ್ಕೃತ ಉಳಿದಿದೆ. ಕೆಲವರ ಮಡಿವಂತಿಕೆಯಿಂದಾಗಿ ಸಂಸ್ಕೃತ ಬೆಳೆಯುತ್ತಿಲ್ಲ. ಭಾಷೆ ಬೆಳೆಸಲು ವಿಶ್ವವಿದ್ಯಾಲಯವು ಸಂಸ್ಕೃತ ಸಂಭಾಷಣೆಯ ಕಿರುಹೊತ್ತಿಗೆ ಗಳನ್ನು ಮುದ್ರಿಸಿ ಹಂಚಬೇಕು’

ನಿವೃತ್ತ ಅಧ್ಯಾಪಕರಾದ ಕೃಷ್ಣಮೂರ್ತಿ (ಎಡದಿಂದ ಕುಳಿತವರು), ಎಂ.ಆರ್‌. ಶಾಂತಕುಮಾರ್‌, ವಿಷ್ಣುಮೂರ್ತಿ, ಸಿ.ಅನಂತ್‌, ಜಿ.ರಾಘವೇಂದ್ರ ಭಟ್‌, ಎಲ್‌.ಚಿಕ್ಕಣ್ಣ ಅವರನ್ನು ಮನು ಬಳಿಗಾರ್‌ ಸನ್ಮಾನಿಸಿದರು. ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಶಿಲ್ಪಾ, ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ, ಪದ್ಮಾಶೇಖರ್‌ ಹಾಗೂ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪಿ.ಆರ್‌.ಪಾಗೋಜಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಆರಂಭಿಸುತ್ತೇವೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪದ್ಮಾಶೇಖರ್‌ ತಿಳಿಸಿದರು. 
 
ನಗರದಲ್ಲಿ ಸೋಮವಾರ ಆಯೋ ಜಿಸಿದ್ದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪ ಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ಸಂಸ್ಕೃತವನ್ನು ಬೆಳೆಸಲು ಸರ್ಕಾರ ಉದಾಸೀನ ತೋರಿಸುತ್ತಿದೆ. ವಿಶ್ವವಿದ್ಯಾ ಲಯದಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಮುಂದಿನ ತಿಂಗಳಿನಲ್ಲಿ ಅಧ್ಯಯನ ಕೇಂದ್ರ ಆರಂಭಿಸುತ್ತೇವೆ’ ಎಂದರು.
 
‘ವಿಶ್ವವಿದ್ಯಾಲಯಕ್ಕಾಗಿ ಐದಾರು ಅಂತಸ್ತಿನ ಬೃಹದಾಕಾರದ ಕಟ್ಟಡ ಕಟ್ಟುವ ಕನಸು ನನಗಿದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ನಗರದಲ್ಲಿ ಈಗಿರುವ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಒಂದು ಮಹಡಿ ಹೆಚ್ಚಿಸಿ ವಿದ್ಯಾರ್ಥಿಗಳ ಓದಿಗೆ ಅನುವು ಮಾಡಿಕೊಡುತ್ತೇವೆ’ ಎಂದು ತಿಳಿಸಿದರು.
 
ಹುಕ್ಕೇರಿ ಹಿರೇಮಠದ ಚಂದ್ರ ಶೇಖರ ಶಿವಾಚಾರ್ಯ ಸ್ವಾಮೀಜಿ, ‘ರಾಜ್ಯದಲ್ಲಿನ ಮಠಗಳಿಂದ ಸಂಸ್ಕೃತ ಉಳಿದಿದೆ. ಕೆಲವರ ಮಡಿವಂತಿಕೆಯಿಂದಾಗಿ ಸಂಸ್ಕೃತ ಬೆಳೆಯುತ್ತಿಲ್ಲ. ಭಾಷೆ ಬೆಳೆಸಲು ವಿಶ್ವವಿದ್ಯಾಲಯವು ಸಂಸ್ಕೃತ ಸಂಭಾಷಣೆಯ ಕಿರುಹೊತ್ತಿಗೆ ಗಳನ್ನು ಮುದ್ರಿಸಿ ಹಂಚಬೇಕು’ ಎಂದು ಸಲಹೆ ನೀಡಿದರು. 
 
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ‘10ನೇ ಶತಮಾನದ ವರೆಗೆ ರಾಜ್ಯದಲ್ಲಿನ ಹೆಚ್ಚು ಜನರಿಗೆ ದೇವನಾಗರಿ ಲಿಪಿ ಬರುತ್ತಿರಲಿಲ್ಲ. ಆಗ, ಕನ್ನಡ ಲಿಪಿಯಿಂದಲೇ ಸಂಸ್ಕೃತ ಭಾಷೆ ರಾಜ್ಯದಲ್ಲಿ ಬೆಳೆಯಿತು’ ಎಂದು ತಿಳಿಸಿದರು.
 
‘ಕೃಷಿಕ, ಸೈನಿಕ ಮತ್ತು ಶಿಕ್ಷಕರಿಂದ ದೇಶದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತಿದೆ. ನೈತಿಕತೆ ಮತ್ತು ಜ್ಞಾನವನ್ನು ತುಂಬುವ ಗುರುಗಳನ್ನು ಮರೆಯಬಾರದು’ ಎಂದರು. 
****
ದೇಶಾಭಿಮಾನ ಮತ್ತು ಭಾಷಾಭಿಮಾನವನ್ನು ಉಕ್ಕಿಸಲು ಕಾವಿಧಾರಿಗಳ ಅಗತ್ಯವಿದೆ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
 
Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚುಟುಕು

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ...

23 Mar, 2018

ಬೆಂಗಳೂರು
ಭಾಷಾ ಅಲ್ಪಸಂಖ್ಯಾತ ಕೋಟಾ: ಪರೀಕ್ಷೆಗೆ ಅನುಮತಿ

‘ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕರ್ನಾಟಕದಲ್ಲಿ ಓದಿದ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದಡಿ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಎದುರಿಸಲು ಅನುಮತಿ ನೀಡಬಹುದು’...

23 Mar, 2018

ಮೂರೂವರೆ ವರ್ಷದ ಬಾಲಕಿಯ ಕೈ– ಕಾಲು ಕಟ್ಟಿ ಅತ್ಯಾಚಾರ
ಪೋಕ್ಸೊ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಮೂರೂವರೆ ವರ್ಷದ ಬಾಲಕಿಯ ಕೈ–ಕಾಲು ಕಟ್ಟಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಎಸ್‌. ಸಂಜಯ್‌ಗೆ (26), 10 ವರ್ಷಗಳ ಕಠಿಣ ಜೈಲು ಶಿಕ್ಷೆ...

23 Mar, 2018

ಬೆಂಗಳೂರು
ವೈದ್ಯಕೀಯ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹ 20 ಲಕ್ಷ ವಂಚನೆ

ತಮ್ಮ ಮಗಳಿಗೆ ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ತಿರುಪತಿಯ ಉದ್ಯಮಿಯೊಬ್ಬರಿಗೆ ₹ 20 ಲಕ್ಷ ವಂಚಿಸಿರುವ ಆರೋಪದಡಿ ವಿಜಯ್ ಎಸ್‌.ರಾಮ್...

23 Mar, 2018

ದಾಬಸ್‌ಪೇಟೆ
ಬೈಕ್‌ಗೆ ಕ್ಯಾಂಟರ್‌ ಡಿಕ್ಕಿ ಇಬ್ಬರ ಸಾವು

ನೆಲಮಂಗಲ ತಾಲ್ಲೂಕು ನಿಡವಂದ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 298ರಲ್ಲಿ ಗುರುವಾರ ಬೈಕ್‌ಗೆ ಕ್ಯಾಂಟರ್‌ ಗುದ್ದಿದ ಪರಿಣಾಮ ದಾಬಸ್‌ಪೇಟೆಯ ಜಗದೀಶ್ ಮತ್ತು ಹೊನ್ನೇನಹಳ್ಳಿ ತಾಂಡ್ಯದ...

23 Mar, 2018