ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಪಡೆಯಲು ಕೌಶಲ ಅಗತ್ಯ

Last Updated 23 ಮೇ 2017, 5:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶೈಕ್ಷಣಿಕ ಜೀವನದಲ್ಲಿ ರ್‌್ಯಾಂಕ್‌ ಪಡೆಯುವುದು ಮುಖ್ಯವಲ್ಲ, ಪರಿಣತಿ ಗಳಿಸುವುದು ಮುಖ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದರು.

ನಗರದ ಆದಿಚುಂಚನಗರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಐಟಿ) ಸೋಮವಾರ ಏರ್ಪಡಿಸಿದ್ದ ಬಿಇ, ಎಂಟೆಕ್, ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸ್ಮಾರ್ಟ್‌ ಫೋನ್‌ಗಳಲ್ಲಿಯೂ ಆವಿಷ್ಕಾರಗಳನ್ನು ಕೈಗೊಳ್ಳಲು ಅವಕಾಶ ಗಳು ಇವೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್ ಜ್ಞಾನ ಅಗತ್ಯ. ಎಂಜಿನಿಯ ರಿಂಗ್‌ ಶಿಕ್ಷಣ ಪೂರೈಸಿದ ನಂತರ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತಾಂತ್ರಿಕ ಪರಿಣತಿ ಇರಬೇಕು ಎಂದರು. 

  ಪದವಿ ನಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ, ಕೆಪಿ ಎಸ್‌ಸಿ), ಸ್ನಾತಕೋತ್ತರ ಪದವಿ (ಎಂ. ಎಸ್, ಎಂ.ಟೆಕ್. ಎಂ.ಇ) ಪಿಎಚ್.ಡಿ ಮಾಡುವತ್ತ ಚಿತ್ತ ಹರಿಸಬೇಕು. ದೂರದೃಷ್ಟಿ, ಸಾಮಾನ್ಯ ಜ್ಞಾನ, ಬದ್ಧತೆ, ಪರಿಶ್ರಮ, ಕೌಶಲ ಇದ್ದರೆ ಯಶಸ್ಸು ಗಳಿಸ ಬಹುದು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕಲಿಕೆ ನಿರಂತರವಾಗಿರಬೇಕು. ಒಳ್ಳೆಯ ನಡವಳಿಕೆ ಮೈಗೂಡಿಸಿಕೊಳ್ಳಬೇಕು. ಶಿಸ್ತನ್ನು ಅಳವಡಿಸಿಕೊಂಡರೆ ಸಾಧನೆಯ ಹಾದಿಯಲ್ಲಿ ಯಶಸ್ಸು ಗಳಿಸಬಹುದು ಎಂದರು.

2015–16ನೇ ಸಾಲಿನಲ್ಲಿ ರ್‌್ಯಾಂಕ್‌ ಪಡೆದವರನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ಮಠದ ಚಿಕ್ಕಮಗ ಳೂರು ಶಾಖಾಮಠದ ಗುಣನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಐ.ಎಂ.ಸಣ್ಣತಮ್ಮೇಗೌಡ, ಎಸ್.ವಿ.ಮಂಜುನಾಥ, ಕೆ.ಮೋಹನ್‌, ಎಐಟಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಕೆ.ಸುಬ್ಬರಾಯ ಇದ್ದರು. 
ಪ್ರಾಧ್ಯಾಪಕ ಸಿ.ಟಿ.ಜಯದೇವ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT