ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ ಅಧಿಕಾರಿಗಳಿಗೆ ತರಾಟೆ

Last Updated 23 ಮೇ 2017, 9:09 IST
ಅಕ್ಷರ ಗಾತ್ರ

ಬಾದಾಮಿ: ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರವಾಸಿ ಪಟ್ಟಣಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾದ ಹೃದಯ ಮತ್ತು ಅಮೃತ ಯೋಜನೆಗಳ ಕಾಮ ಗಾರಿಯನ್ನು ಬೇಗ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್‌ ಹೇಳಿದರು.

ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಸೋಮವಾರ ‘ಹೃಯದ’ ಮತ್ತು ‘ಅಮೃತ’  ಯೋಜನೆಗಳ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಮಾತನಾಡಿದರು. ಪ್ರವಾಸಿ ತಾಣವನ್ನು ಸುಂದರ ಗೊಳಿಸಲು ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಹೃದಯ ಯೋಜನೆಯಲ್ಲಿ ₹ 22.26 ಕೋಟಿ ಮತ್ತು ಅಮೃತ ಯೋಜನೆಯಲ್ಲಿ  ₹ 20 ಕೋಟಿ ಬಿಡುಗಡೆ ಮಾಡಿದೆ ಎಂದರು.

ಕೇಂದ್ರದ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರು ಈಚೆಗೆ ಬೆಂಗಳೂರಿಗೆ ಬಂದಾಗ ಬಾದಾಮಿ ಪಟ್ಟಣದ ಯೋಜನೆಗಳ ಕಾಮಗಾರಿ ಅಭಿವೃದ್ಧಿ  ಕುರಿತು ಕೇಳಿದರು. ಅಧಿಕಾರಿ ಗಳು ಬೇಗ ಕಾಮಗಾರಿಯನ್ನು ಆರಂಭಿಸ ಬೇಕು ಎಂದು ಸೂಚಿಸಿದರು.

ಅಮೃತ ಯೋಜನೆಯ ₹ 15 ಕೋಟಿ ವೆಚ್ಚದ ಒಳಚರಂಡಿ ಮತ್ತು ₹ 9 ಕೋಟಿ  ವೆಚ್ಚದ ನೀರು ಪೂರೈಕೆ ಕಾಮಗಾರಿ ಟೆಂಟರ್‌ ಪ್ರಕ್ರಿಯೆ ಮುಗಿದು ಅನೇಕ ತಿಂಗಳಾದರೂ ಕಾಮಗಾರಿ ಆರಂಭವಾಗದ ಕಾರಣ ಸಚಿವರು ಕೆಯು ಐಡಿಎಫ್‌ಸಿ ಅಧಿಕಾರಿ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

ಹಣ ಮಂಜೂರಾಗಿ ಎರಡು ವರ್ಷವಾಯ್ತು. ಅಧಿಕಾರಿಗಳು ನೀವೇನು ನಿದ್ದೇ ಮಾಡ್ತಿರೇನ್ರಿ? ನಾನು ಮತ್ತೆ ಬರ್ತಿನಿ ಕೆಲಸ ನೋಡ್ತೀನಿ ಎಂದು ಸಚಿವರು ಒಳಚರಂಡಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಕೆಯುಐಡಿಎಫ್‌ಸಿ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ನಾಗರತ್ನಾ ಕಾಮಗಾರಿಯನ್ನು ಬೇಗ ಆರಂಭಿಸುವು ದಾಗಿ ಸಭೆಯಲ್ಲಿ ಸಚಿವರಿಗೆ ಹೇಳಿದರು. ಬಾದಾಮಿ ಪಟ್ಟಣಕ್ಕೆ ಆಲಮಟ್ಟಿ ಜಲಾಶಯದಿಂದ ₹ 60 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆ ಮತ್ತು ಪಟ್ಟಣಕ್ಕೆ ಸಂಪೂರ್ಣವಾಗಿ ಎಲ್‌ಈಡಿ ಲೈಟ್‌ ಮಂಜೂರು ಮಾಡುವುದಾಗಿ ಸಭೆಯಲ್ಲಿ ನಗರಾಭಿವೃದ್ಧಿ ತಿಳಿಸಿದರು.

ರಾಜ್ಯ ನಗರಾಭಿವೃದ್ಧಿ ಹೆಚ್ಚುವರಿ ನಿರ್ದೇಶಕ ಮಹೇಂದ್ರ ಜೈನ್‌ ಹೃದಯ ಯೋಜನೆಗಳ ₹ 22.26 ಕೋಟಿ ವೆಚ್ಚದ ರಸ್ತೆ ಕಾಮಗಾರಿ,ತ್ಯಾಜ್ಯ ನಿರ್ವಹಣೆ, ಸ್ವಾಗತ ಕಮಾನು, ಪಾರ್ಕಿಂಗ್‌  ಪ್ಲಾಜಾ ಮತ್ತು ಉದ್ಯಾನವನ  ಕಾಮಗಾರಿ ಕುರಿತು ವಿವರಿಸಿದರು.

ಪುರಸಭೆ ಅಧ್ಯಕ್ಷ ಫಾರೂಕ್‌ಅಹ್ಮದ್‌ ದೊಡಮನಿ ಪಟ್ಟಣಕ್ಕೆ ಶಾಶ್ವತ ಕುಡಿ ಯುವ ನೀರಿನ ಯೋಜನೆ, ಪುರಸಭೆ ನೂತನ ಕಟ್ಟಡ, ತರಕಾರಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.

ಉಪಾಧ್ಯಕ್ಷೆ ವಿಜಯಲಕ್ಷ್ಮಿ  ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ನಿಂಗಮ್ಮ ರೋಣದ, ಸದಸ್ಯರು, ತಹಶೀಲ್ದಾರ್‌ ಎಸ್‌. ರವಿಚಂದ್ರ, ನಗರಾಭಿ ವೃದ್ಧಿ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಇದ್ದರು. ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಸ್ವಾಗತಿಸಿದರು.

* * 

ಚಾಲುಕ್ಯರ ರಾಜಧಾನಿ,  ಐತಿಹಾಸಿಕ ಸಾಂಸ್ಕೃತಿಕ ಪಟ್ಟಣವನ್ನು ಶೀಘ್ರವಾಗಿ ಸುಂದರಗೊಳಿಸಿ ಪ್ರವಾಸೋದ್ಯಮ ಬೆಳೆಯುವಂತೆ ಮಾಡಿ
ರೋಷನ್‌ಬೇಗ್‌
ನಗರಾಭಿವೃದ್ಧಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT