ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಗೆ ಹುಮಾ ಜೋಡಿ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ರಜನಿಕಾಂತ್‌ ಜೊತೆ ನಟಿಸಬೇಕೆಂಬುದು ಬಹು ನಟಿಯರ ಕನಸು. ಈ ಕನಸು ನನಸಾದ ಹೆಮ್ಮೆಯಲ್ಲಿ ಬೀಗುತ್ತಿದ್ದಾರೆ ಹುಮಾ ಖುರೇಶಿ.

ರಜನಿಕಾಂತ್‌ ಮುಂದಿನ ಸಿನಿಮಾದಲ್ಲಿ ಹುಮಾಗೆ ಅವಕಾಶ ಸಿಕ್ಕಿರುವುದು ಪಕ್ಕಾ ಆಗಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ನಟಿ ವಿದ್ಯಾ ಬಾಲನ್‌ ಕಾರಣಾಂತರದಿಂದ ಈ ಸಿನಿಮಾ ಅವಕಾಶವನ್ನು ಕೈಚೆಲ್ಲಿದ್ದರಿಂದ ಹುಮಾಗೆ ಅದೃಷ್ಟ ಖುಲಾಯಿಸಿದೆ. ಆದರೆ ಹುಮಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ. ಅಧಿಕೃತವಾಗುವವರೆಗೂ ನಾನೇನು ಮಾತನಾಡುವುದಿಲ್ಲ ಎಂದಿದ್ದಾರೆ.

ಪಾ ರಂಜಿತ್‌ ಅವರು ಈ ಸಿನಿಮಾ ನಿರ್ದೇಶಿಸಲಿದ್ದು, ರಜನಿ ಮಗಳು ಐಶ್ವರ್ಯಾ ಸಿನಿಮಾದ ನಿರ್ಮಾಪಕಿ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT