ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಹಣ ಪೂರೈಕೆ ತಡೆಗೆ ಕ್ರಮ

ಕಾರ್ಯತಂತ್ರ ರೂಪಿಸಲು ಅಮೆರಿಕದ ಜತೆ ಕೈಜೋಡಿಸಿದ ಆರು ರಾಷ್ಟ್ರಗಳು
Last Updated 23 ಮೇ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಸ್ಲಾಮಿಕ್‌ ಸ್ಟೇಟ್ (ಐಎಸ್‌), ಲಷ್ಕರ್‌ ಎ ತಯಬಾ, ಹಖ್ಖಾನಿ ಜಾಲ ಮತ್ತು ತಾಲಿಬಾನ್‌ ಮುಂತಾದ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುವುದನ್ನು ತಡೆಯಲು ಅಮೆರಿಕದ ಜತೆ ಆರು ಕೊಲ್ಲಿ ರಾಷ್ಟ್ರಗಳು ಕೈಜೋಡಿಸಿವೆ.

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಸಂಬಂಧ ಗಲ್ಫ್‌ ಕಾರ್ಪೊರೇಷನ್‌ ಕೌನ್ಸಿಲ್‌ನ (ಜಿಸಿಸಿ) ಆರು ಸದಸ್ಯ ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಆರು ರಾಷ್ಟ್ರಗಳಲ್ಲಿ ಬಹರೇನ್, ಕುವೈತ್‌, ಸೌದಿ ಅರೇಬಿಯಾ, ಒಮಾನ್, ಕತಾರ್‌ ಮತ್ತು ಯುಎಇ ಸೇರಿವೆ. ಉಗ್ರ ಸಂಘಟನೆಗಳಿಗೆ ಹಣಕಾಸು ಸೇರುವುದನ್ನು ತಡೆಯಲು ಅಮೆರಿಕದ ಜತೆ ಈ ಆರೂ ರಾಷ್ಟ್ರಗಳು ಹೊಸ ರೀತಿಯ ಅಸ್ತ್ರಗಳನ್ನು ಬಳಸಲಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಂಬಂಧ ಉಗ್ರರ ಹಣಕಾಸು ಮೂಲ ಗುರಿಯಾಗಿಸಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಇರಾನ್‌, ಮಧ್ಯಪ್ರಾಚ್ಯ ಸೇರಿದಂತೆ ಹಲವು ರಾಷ್ಟ್ರಗಳಿಂದ ಉಂಟಾಗುವ ಭಯೋತ್ಪಾದನಾ ಬೆದರಿಕೆ ತಡೆಗೂ ಕ್ರಮ ಕೈಗೊಳ್ಳಲು ಈ ಏಳು ದೇಶಗಳು ಮುಂದಾಗಿವೆ. ‘ಉಗ್ರರ ಬೆದರಿಕೆಯನ್ನು ಹತ್ತಿಕ್ಕಲು ಕೊಲ್ಲಿ ರಾಷ್ಟ್ರಗಳು ಸಂಪೂರ್ಣ ಸಹಕಾರ ನೀಡಲಿವೆ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಟೀವನ್‌ ಟಿ.ನುಚಿನ್‌ ಹೇಳಿದ್ದಾರೆ.

ಲಷ್ಕರ್‌ ಎ ತಯಬಾ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಗೆ ಕೊಲ್ಲಿ ರಾಷ್ಟ್ರಗಳು ಹಣಕಾಸು ನೆರವು ನೀಡುತ್ತಾ ಬಂದಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಉಗ್ರರು ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಉಗ್ರ ಸಂಘಟನೆಗಳು ಬಹಿರಂಗವಾಗಿ  ಪಾಕಿಸ್ತಾನದಲ್ಲಿ ಹಣ ಸಂಗ್ರಹಿಸುತ್ತಿದ್ದರೂ   ಏಕೆ ಆ ದೇಶವನ್ನು ಜಿಸಿಸಿಯಲ್ಲಿ ಸೇರಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಅಮೆರಿಕದ ಅಧಿಕಾರಿಗಳು ನಿಖರ ಉತ್ತರ ನೀಡಿಲ್ಲ.

ಬೆತ್ಲೆಹೆಮ್‌ಗೆ ಟ್ರಂಪ್‌ ಭೇಟಿ
ಬೆತ್ಲೆಹೆಮ್‌(ಎಎಫ್‌ಪಿ): ಪ್ಯಾಲಸ್ತೀನ್‌ ಮುಖಂಡ ಮಹಮುದ್‌ ಅಬ್ಬಾಸ್‌ ಅವರೊಂದಿಗೆ ಮಾತುಕತೆ ನಡೆಸಲು ಡೊನಾಲ್ಡ್‌ ಟ್ರಂಪ್‌ ಬೆತ್ಲೆಹೆಮ್‌ಗೆ ಮಂಗಳವಾರ ಬಂದಿಳಿದರು. ವೆಸ್ಟ್‌ಬ್ಯಾಂಕ್‌ ಸಿಟಿಯ ಅಧ್ಯಕ್ಷೀಯ ಅರಮನೆಯಲ್ಲಿ ಟ್ರಂಪ್‌ ಅವರನ್ನು ಅಬ್ಬಾಸ್‌ ಸ್ವಾಗತಿಸಿದರು. ಇಸ್ರೇಲ್‌ ಮತ್ತು ಪ್ಯಾಲಸ್ತೀನ್‌ ನಡು ವಣ ಶಾಂತಿ ಸ್ಥಾಪನೆ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಟ್ರಂಪ್‌ ಸೋಮವಾರ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT