ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯಕ್ಕೆ ಕಾಲಿಟ್ಟ ‘ಕಪ್ಪೆರಾಯ’

Last Updated 24 ಮೇ 2017, 9:24 IST
ಅಕ್ಷರ ಗಾತ್ರ

ಹಿರೇಕೆರೂರ: ರವಿಚಂದ್ರನ್ ಅಭಿನ ಯದ ‘ಹಳ್ಳಿಮೇಷ್ಟ್ರು’ ಚಿತ್ರದ ಕಪ್ಪೆರಾಯ ಪಾತ್ರಧಾರಿ, ಎರಡೂವರೆ ಅಡಿ ಎತ್ತರದ ಫಕೀರಪ್ಪ ದೊಡ್ಡಮನಿ ತಾಲ್ಲೂಕಿನ ಚಿಕ್ಕೊಣತಿ ಗ್ರಾಮದಲ್ಲಿ ದಾಂಪತ್ಯಕ್ಕೆ ಕಾಲಿ ರಿಸಿದರು. ಶ್ರೀರಾಮಕೊಪ್ಪ ಗ್ರಾಮದ ಗಂಗಮ್ಮ ಜೊತೆ ಫಕೀರಪ್ಪ ಸಪ್ತಪದಿ ತುಳಿದರು.

ಮೂಲತಃ ಹಾವೇರಿ ತಾಲ್ಲೂಕು ಚಿಕ್ಕ ಲಿಂಗದಹಳ್ಳಿ ಗ್ರಾಮದ ಬಡ ಕುಟುಂಬದ ಫಕೀರಪ್ಪ ಕಳೆದ ಫೆಬ್ರವರಿ ತಿಂಗಳಲ್ಲಿ ಚಿಕ್ಕೊಣತಿ ಗ್ರಾಮದಲ್ಲಿ ನಡೆದ ರೇಣುಕಾ ದೇವಿ ಜಾತ್ರೆಯಲ್ಲಿ ಕಾರ್ಯ ಕ್ರಮ ನೀಡಲು ಬಂದಿದ್ದರು. ಆ ಸಂದರ್ಭ ದಲ್ಲಿ ಗ್ರಾಮಸ್ಥರೊಂದಿಗಿನ ಒಡನಾಟದ ಫಲ ವಾಗಿ ಗ್ರಾಮದ ಅವರ ಬಂಧುಗ ಳಾದ ನಿಂಗಪ್ಪ ದೊಡ್ಡಮನಿ ಹಾಗೂ ಸ್ಥಳೀ ಯರು ಕನ್ಯೆಯನ್ನು ಹುಡುಕಿ ತಾವೇ ವಿವಾಹ ನೆರವೇರಿಸಿದರು.

ಕುಳ್ಳ ಎಂಬ ಕಾರಣಕ್ಕೆ ಸಮಾಜ ದಿಂದ ಗೇಲಿಗೊಳಗಾಗಿ ಆತ್ಮಹತ್ಯೆ ಮಾಡಿ ಕೊಳ್ಳುವ ಹಂತಕ್ಕೆ ಹೋಗಿದ್ದೆ. ಕೊನೆಗೆ ಏನಾದರೂ ಸಾಧಿಸಬೇಕು ಎಂಬ ಛಲ ದಿಂದ ಮುಂದೆ ಸಾಗಿದ್ದರಿಂದ ಚಿತ್ರರಂಗ ದಲ್ಲಿ ಅವಕಾಶ ಪಡೆಯಲು ಸಾಧ್ಯವಾಯಿತು. ಇಲ್ಲಿಯವರೆಗೆ 16 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ನವ ಜೀವನಕ್ಕೆ ಕಾಲಿರಿಸಿದ ಫಕೀರಪ್ಪ ಹೇಳಿದರು.
ಅಂಗವಿಕಲರ ಸಂಘ ಸ್ಥಾಪಿಸಿ ಅಂಗ ವಿಕಲರಿಗೆ ಸಹಾಯ ಹಸ್ತ ಚಾಚುತ್ತ, ವರ್ಷಕ್ಕೆ 2 ಜೋಡಿ ಅಂಗವಿಕಲರ ವಿವಾಹ ನೆರವೇರಿಸುತ್ತ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವು ದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT