ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೀಗ ದೊಡ್ಡವರು...

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದಲ್ಲಿ ಹುಡುಗ–ಹುಡುಗಿಯರು 19ನೇ ವರ್ಷಕ್ಕೆ ಕಾಲಿಡುವುದೇ ತಡ, ಅಂಥವರನ್ನೆಲ್ಲ ಒಟ್ಟಿಗೆ ಸೇರಿಸಿ, ದೊಡ್ಡ ಸಮಾರಂಭ ಮಾಡಿ, ಇವರೆಲ್ಲ ಈಗ ಪ್ರಾಯಕ್ಕೆ ಬಂದವರು ಎಂದು ಸಾರಲಾಗುತ್ತದೆ.

ಅಂದಹಾಗೆ, ಪ್ರಾಯಕ್ಕೆ ಬಂದವರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ತಾನೆ? ಈ ದೇಶದಲ್ಲಿ ‘ಪ್ರಾಯದ ಸಂಭ್ರಮ’ ಆಚರಿಸಿಕೊಂಡವರಿಗೆ ಬೇಕೆನಿಸಿದಾಗಲೆಲ್ಲ ಬಾರ್‌ಗೆ ಹೋಗಿಬರಲು ಅನುಮತಿ ಸಿಕ್ಕಹಾಗಂತೆ. ನಮ್ಸನ್‌ ಹಾನೋಕ್‌ ಎಂಬ ಗ್ರಾಮದಲ್ಲಿ ಇತ್ತೀಚೆಗೆ ನಡೆದ ‘ಪ್ರಾಯ ಉತ್ಸವ’ದಲ್ಲಿ ಕಂಡ ನೋಟವಿದು

**

ಯೋಗದಲ್ಲಿ ಭೋಗ!

ಅಮೆರಿಕದ ನಾಟಿಂಗ್‌ಹ್ಯಾಂನಲ್ಲಿ ಮೊನ್ನೆ ಮೇಕೆಗಳೊಟ್ಟಿಗೆ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸುತ್ತಿದ್ದರು. ಈ ಅಭ್ಯಾಸಕ್ಕೆ ಅವರಿಟ್ಟ ಹೆಸರು ‘ಎಂಟು ವಿದ್ಯಾರ್ಥಿಗಳು ಹಾಗೂ ಐದು ಮೇಕೆಗಳು’ ಎಂದು! ಆಸನ ಹಾಕುವಾಗ ಈ ಪುಟಾಣಿ ಮೇಕೆ ಓಡಿಬಂತಾ? ಬಂದಿದ್ದೇ ಜುಲಿಯಾ ಎಂಬ ವಿದ್ಯಾರ್ಥಿನಿಯ ಕೆನ್ನೆಯನ್ನು ನೆಕ್ಕಲು ಆರಂಭಿಸಿತು. ಯೋಗ ಮರೆತ ಜುಲಿಯಾ ಮೇಕೆ ಮರಿಗೆ ಕೆನ್ನೆಯನ್ನು ಒಪ್ಪಿಸಿ ಮಲಗಿಬಿಟ್ಟಳು!

**

ತುತ್ತು ಅನ್ನಕ್ಕಾಗಿ...

ದಕ್ಷಿಣ ಸುಡಾನ್‌ನಲ್ಲಿ ಈಗ ಭೀಕರ ಕ್ಷಾಮ. ಹಸಿವಿನಿಂದ ತತ್ತರಿಸಿರುವ ಜನರೆಲ್ಲ ವಿಶ್ವಸಂಸ್ಥೆ ತೆರೆದಿರುವ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ಉಳಿದಿಕೊಂಡಿರುವ ಈ ಬಾಲಕನಿಗೆ ಹಸಿದ ಹೊಟ್ಟೆ ಯಾವಾಗ ತುಂಬೀತು ಎನ್ನುವುದಷ್ಟೇ ಚಿಂತೆ. ಅಲ್ಲವೆ ಮತ್ತೆ, ಶಾಲೆಗೆ ಹೋಗುವ, ಆಟ–ಪಾಠದಲ್ಲಿ ತೊಡಗುವ ಕನಸುಗಳಿಗೆ ಹಸಿದ ಹೊಟ್ಟೆಗಳ ಈ ಶಿಬಿರದಲ್ಲಿ ಎಲ್ಲಿದ್ದೀತು ತಾವು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT