ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಹೀರ್‌–ಸಾಗರಿಕಾ ನಿಶ್ಚಿತಾರ್ಥ

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟಿಗ ಜಹೀರ್‌ ಖಾನ್‌ ಮತ್ತು ನಟಿ ಸಾಗರಿಕಾ ಘಾಟ್ಗೆ ಅವರು ಮಂಗಳವಾರ ಮುಂಬೈನ ಸೇಂಟ್‌ ರೇಜಿಸ್‌ ಹೊಟೇಲ್‌ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಹೋದ ತಿಂಗಳು ನಿಶ್ಚಿತಾರ್ಥದ ವಿಷಯವನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಬಹಿರಂಗಪಡಿಸಿದ್ದ ಈ ಜೋಡಿ ಮಂಗಳವಾರ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಉಂಗುರ ಬದಲಿಸಿಕೊಂಡಿತು. 

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಜಹೀರ್‌ ಅವರು ಸೂಟ್‌ನಲ್ಲಿ ಮಿಂಚಿದರೆ, ಸಾಗರಿಕಾ ಅವರು  ತಿಳಿಹಸಿರು ಬಣ್ಣದ ಗೌನ್‌ ತೊಟ್ಟಿದ್ದರು.
ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮತ್ತು ಅವರ ಪತ್ನಿ ಅಂಜಲಿ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ನಟಿ ಅನುಷ್ಕಾ ಶರ್ಮಾ, ರೋಹಿತ್‌ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೆ, ಯುವರಾಜ್‌ ಸಿಂಗ್‌, ನಟ ಅಂಗದ್‌ ಬೇಡಿ, ಬಾಬಿ ಡಿಯೊಲ್‌, ಅರ್ಷಾದ್‌ ವಾರ್ಸಿ ಮತ್ತು ಅವರ ಪತ್ನಿ ಮರಿಯಾ ಗೊರೆಟ್ಟಿ, ನಟಿ ಮಂದಿರಾ ಬೇಡಿ, ಸನಾ ಖಾನ್‌, ಪ್ರಾಚಿ ದೇಸಾಯಿ ರವೀನಾ ಟಂಡನ್‌, ಅನಿಲ್‌ ಥಡಾನಿ, ಕ್ರಿಕೆಟಿಗ ರಾದ ಮೊಹಮ್ಮದ್‌ ಕೈಫ್‌, ಪಾರ್ಥಿವ್‌ ಪಟೇಲ್‌ ಸೇರಿದಂತೆ ಅನೇಕ ಮಂದಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

38 ವರ್ಷದ ಜಹೀರ್‌ ಮತ್ತು  31 ವರ್ಷದ ಸಾಗರಿಕಾ ಅವರು ಬಹುಕಾಲದ ಸ್ನೇಹಿತರಾಗಿದ್ದರು. ಎಡಗೈ ಬೌಲರ್‌ ಜಹೀರ್‌, ಎರಡು ವರ್ಷದ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸಾಗರಿಕಾ, ‘ಚಕ್‌ ದೆ ಇಂಡಿಯಾ’ ಸಿನಿಮಾದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT