ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಜ್ಞಾನ ದೇಗುಲ’

ಸಿಇಟಿ ಮತ್ತು ಕಾಮೆಡ್‌–ಕೆ ಕುರಿತು ಕೌನ್ಸೆಲಿಂಗ್
Last Updated 25 ಮೇ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಒಂದೆಡೆ ಸೇರಿಸಲು  ಬೃಹತ್‌ ವೇದಿಕೆ ಮತ್ತೊಮ್ಮೆ ಸಿದ್ಧವಾಗಿದೆ.

ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಶಿಕ್ಷಣ ತಜ್ಞರ ಸಲಹೆ ಪಡೆಯಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ‘ಜ್ಞಾನ ದೇಗುಲ ಶೈಕ್ಷಣಿಕ ಮೇಳದ 9ನೇ ಆವೃತ್ತಿ’ಯನ್ನು ಆಯೋಜಿಸಲಾಗಿದೆ. 

ಇದೇ 27 ಮತ್ತು 28ರಂದು ಬೆಂಗಳೂರಿನ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಮತ್ತು ಜೂನ್‌ 3 ಮತ್ತು 4 ರಂದು ಹುಬ್ಬಳ್ಳಿಯ ಗೋಕುಲ್‌ ಗಾರ್ಡನ್ಸ್‌ನಲ್ಲಿ ಈ ಶೈಕ್ಷಣಿಕ ಮೇಳ ನಡೆಯಲಿದೆ. ಇದರಲ್ಲಿ ರಾಜ್ಯದ ಹೆಸರಾಂತ ಮತ್ತು ಶೈಕ್ಷಣಿಕ ರಂಗದಲ್ಲಿ ಗುಣಮಟ್ಟದ ಸಾಧನೆ ಮಾಡಿರುವ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ.

ಇದರಲ್ಲಿ ಹೊಸ ಕೋರ್ಸ್‌ಗಳು, ಭವಿಷ್ಯದ ವೃತ್ತಿ ಬದುಕಿಗೆ ಪೂರಕವಾದ ಕೋರ್ಸ್‌ಗಳ ಮಾಹಿತಿ ಸಿಗಲಿದೆ.  ಜತೆಗೆ ಶಿಕ್ಷಣ ತಜ್ಞರೊಂದಿಗೆ ಸಂವಾದ ಮತ್ತು ಅವರಿಂದ ಸಲಹೆಗಳನ್ನು ಪಡೆಯಲು ಅವಕಾಶವಿದೆ. ಸುಲಭದಲ್ಲಿ ಶೈಕ್ಷಣಿಕ ಸಾಲ ಪಡೆಯುವುದನ್ನು ತಿಳಿಯಬಹುದು. ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಭಾಗವಹಿಸುವ ಸಂಸ್ಥೆಗಳು: ಸಿಎಂಆರ್ ವಿಶ್ವವಿದ್ಯಾಲಯ, ಗೀತಮ್‌ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ ವಿಶ್ವವಿದ್ಯಾಲಯ, ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಅಮಿಟಿ ಶಿಕ್ಷಣ ಸಂಸ್ಥೆ, ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯ, ಎಐಎಂಎಸ್‌ ಸಂಸ್ಥೆಗಳು, ಆಚಾರ್ಯ ಶಿಕ್ಷಣ ಸಂಸ್ಥೆ, ಕೆಂಬ್ರಿಜ್‌ ತಾಂತ್ರಿಕ ಶಿಕ್ಷಣ ಸಂಸ್ಥೆ, ಎಂ.ಎಸ್‌.ಎಂಜಿನಿಯರಿಂಗ್‌ ಕಾಲೇಜು, ಈಸ್ಟ್‌–ವೆಸ್ಟ್‌ ಸಂಸ್ಥೆಗಳು, ಜಿಐಟಿ ಬೆಳಗಾವಿ, ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜು, ಜೆಜಿಐ ಶಿಕ್ಷಣ ಸಂಸ್ಥೆಗಳು, ಕೃಪಾನಿಧಿ ಶಿಕ್ಷಣ ಸಂಸ್ಥೆಗಳು, ಸಂಭ್ರಮ್‌ ಸಂಸ್ಥೆಗಳು, ದಿಕ್ಷಾ ಶಿಕ್ಷಣ ಸಂಸ್ಥೆ, ಗೆಲಿಲಿಯೋ ಮತ್ತು ಇಂಪ್ಯಾಕ್ಟ್‌ ಸಂಸ್ಥೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT