ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ: ಪ್ರತಿಭಟನೆ

Last Updated 26 ಮೇ 2017, 9:55 IST
ಅಕ್ಷರ ಗಾತ್ರ

ರಾಂಪುರ (ಬಾಗಲಕೋಟೆ): ರಾಜ್ಯ ನದಿ ನೀರು ಪೂರೈಕೆ ನೌಕಕರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ಬುಧವಾರ ಆಲಮಟ್ಟಿ ಜಲಾಶಯದ ಹತ್ತಿರದ ಜಾಕ್‌ವೆಲ್‌ ಎದುರು ನೌಕರರು ಪ್ರತಿಭಟನೆ ನಡೆಸಿದರು.

ರಾಂಪುರ ಹಾಗೂ ಇತರೆ 14 ಗ್ರಾಮ ಗಳ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸ ಬೇಕು. ಕನಿಷ್ಠ ವೇತನ ಹಾಗೂ ಇಎಸ್ಐ ಮತ್ತು ಪಿಎಫ್( ಭವಿಷ್ಯ ನಿಧಿ) ಸೌಲಭ್ಯ ಒದಗಿಸಬೇಕು. ಸೇವಾ ನಿರತ ಕಾರ್ಮಿಕ ರಿಗೆ ವೇತನ ಪಾವತಿ, ಪಂಪ್ ಹೌಸ್‌ ನಿಂದ ಜಾಕ್‌ವೆಲ್‌ವರೆಗೆ ತೆರಳಲು ಸಾರಿಗೆ ಭತ್ಯೆ ಮತ್ತು ಟೆಲಿ ಫೋನ್ ವೆಚ್ಚ ನೀಡಬೇಕು.

ಕೆಲಸದ ಸ್ಥಳದಲ್ಲಿ ಹ್ಯಾಂಡ್ ಗ್ಲೌಸ್, ಶೂ, ಟಾರ್ಚ್, ರಬ್ಬರ್ ಮ್ಯಾಟ್ ಹಾಗೂ ಜಾಕ್‌ವೆಲ್‌ಗಳಲ್ಲಿ ಸ್ವಚ್ಛವಾದ ಗಾಳಿ ಬೆಳಕು ಒಳಗೊಂಡ ಕೋಣೆ ಒದಗಿಸಬೇಕು. ಕೆಲಸದ ಸಮಯವನ್ನು 8 ಗಂಟೆಗೆ ಸೀಮಿತಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಚ್‌.ಟಿ.ಮಲ್ಲಿಕಾ ರ್ಜುನ. ಮಹಾದೇವ ಜನಗೊಂಡ, ಉಮೇಶ ಮಾದರ, ಬಸವರಾಜ ಗೌಡರ, ರಮೇಶ ಗೌಡರ, ಶರ್ಪಣ್ಣ ಎರಡೆಮ್ಮೆ, ಸಿದ್ದಪ್ಪ ಹೂನಳ್ಳಿ, ರಾಮಣ್ಣ ಮಾದರ, ರಮೇಶ ಬಂಡಿವಡ್ಡರ, ಪರಶುರಾಮ ಆಲೂರ, ನಾರಾಯಣ ಇಂಗಳೆ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT