ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೇಂದರ್‌–ಜುಲ್ಫಿಕರ್ ಪೈಪೋಟಿಗೆ ಡಬ್ಲ್ಯುಬಿಒ ಸಮ್ಮತಿ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವಿಜೇಂದರ್ ಸಿಂಗ್ ಹಾಗೂ ಚೀನಾದ ಜುಲ್ಫಿಕರ್ ಮೈಮತಿಲಿ ಅವರ ನಡುವಿನ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್‌ ಹಾಗೂ ಓರಿಯಂಟಲ್ ಸೂಪರ್ ಮಿಡ್ಲ್‌ವೇಟ್‌ ವೃತ್ತಿಪರ ಪೈಪೋಟಿಗೆ ವಿಶ್ವ ಬಾಕ್ಸಿಂಗ್‌ ಸಂಸ್ಥೆ (ಡಬ್ಲ್ಯುಟಿಒ) ಗುರುವಾರ ಒಪ್ಪಿಗೆ ಸೂಚಿಸಿದೆ.

ಮುಂಬೈನಲ್ಲಿ ಆಗಸ್ಟ್ ತಿಂಗಳಿನ ಮೊದಲ ವಾರದಲ್ಲಿ ವಿಜೇಂದರ್ ಹಾಗೂ ಜುಲ್ಫಿಕರ್ ನಡುವೆ ಹಣಾಹಣಿ ನಡೆಯಲಿದೆ.

ವಿಜೇಂದರ್ ಈಗಾಗಲೇ ಏಷ್ಯಾ ಪೆಸಿಫಿಕ್ ವಲಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅದೇ ರೀತಿ ಜುಲ್ಫಿಕರ್ ಕೂಡ ಓರಿಯಂಟಲ್ ಸೂಪರ್ ಮಿಡ್ಲವೇಟ್‌ನ ಚಾಂಪಿಯನ್ ಆಗಿದ್ದಾರೆ.

‘ಏಷ್ಯಾದ ಅತ್ಯಂತ ದೊಡ್ಡ ಪೈಪೋಟಿಗೆ ಡಬ್ಲ್ಯುಬಿಒ ಸಮ್ಮತಿ ಸೂಚಿಸಿರುವುದು ಸಂತೋಷ ತಂದಿದೆ. ಪಂದ್ಯದ ದಿನಾಂಕವನ್ನು ನಿಗದಿ ಮಾಡಬೇಕಿದೆ’ ಎಂದು ಐಒಎಸ್ ಬಾಕ್ಸಿಂಗ್ ಸಂಸ್ಥೆಯ ಮುಖ್ಯಸ್ಥ ನೀರವ್ ತೋಮರ್ ಹೇಳಿದ್ದಾರೆ.

ವಿಜೇಂದರ್ 2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಕಾಲಿಟ್ಟಿದ್ದರು. ಇತ್ತೀಚೆಗೆ ಏಷ್ಯಾ ಪೆಸಿಫಿಕ್ ಗೆದ್ದುಕೊಂಡಿದ್ದರು.

ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ  ಗೆಲುವು ದಾಖಲಿಸಿದ್ದಾರೆ. ಡಿಸೆಂಬರ್‌ನಲ್ಲಿ ತಾಂಜಾನಿಯಾದ ಫ್ರಾನ್ಸಿಸ್ ಚೆಕಾ ವಿರುದ್ಧ ಆಡಲಿದ್ದಾರೆ.

22 ವರ್ಷದ ಚೀನಾದ ಅಗ್ರಗಣ್ಯ ಬಾಕ್ಸರ್ ಜುಲ್ಫಿಕರ್‌ ಈಗಾಗಲೇ 8ರಲ್ಲಿ 7  ಬೌಟ್‌ಗಳಲ್ಲಿ ಆಡಿ ಗೆದ್ದುಕೊಂಡಿದ್ದಾರೆ. ಈ ಆಟಗಾರ ಕೂಡ 2015ರಲ್ಲಿಯೇ ವೃತ್ತಿಪರ ಬಾಕ್ಸಿಂಗ್ ಆರಂಭಿಸಿದರು.

ಓರಿಯಂಟಲ್ ಪ್ರಶಸ್ತಿಯನ್ನು ಹೋದ ವರ್ಷ ಜುಲೈನಲ್ಲಿ ಗೆದ್ದುಕೊಂಡರು. ತಾಂಜಾನಿಯಾದ ಥಾಮಸ್‌ ಮಶಾಲಿ ವಿರುದ್ಧ ಸುಲಭದ ಗೆಲುವು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT