ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 29–6–1967

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

* ದೇಶದ ರಕ್ಷಣಾ ಸಾಮರ್ಥ್ಯ ಈಗ ಉತ್ತಮ
ನವದೆಹಲಿ, ಜೂನ್ 28–
ಆಕ್ರಮಣವನ್ನು ಎದುರಿಸಲು ಭಾರತವು 1962 ಅಥವಾ 1965ಕ್ಕಿಂತಲೂ ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ರಕ್ಷಣಾಮಂತ್ರಿ ಶ್ರೀ ಸ್ವರಣ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ಹೇಳಿದರು.

‘ಇಷ್ಟು ದಿನವೂ ಸುಮ್ಮನೆ ಕುಳಿತಿರಲಿಲ್ಲ. ಅನೇಕ ಕ್ಷೇತ್ರಗಳಲ್ಲಿ ಸ್ಥಾನೀಯ ಉತ್ಪಾದನೆಯನ್ನು ವ್ಯವಸ್ಥೆಗೊಳಿಸಲಾಗಿತ್ತು’ ಎಂದು ಅವರು ಹೇಳಿದರು.

*  ಯುಕ್ತಿಮಾನ್
ಬೆಂಗಳೂರು, ಜೂ. 28–
 ಆನೆಕಾಲು ಹರಡುವ ಸೊಳ್ಳೆಯ ಸಂತತಿಯನ್ನೇ ಬದಲಾಯಿಸಿದಲ್ಲಿ ರೋಗ ಹರಡುವುದು ನಿಲ್ಲುವುದು. ಇಂದು ಈ ಸಲಹೆಯನ್ನು ವಿಧಾನ ಪರಿಷತ್ತಿನಲ್ಲಿ ಮಾಡಿದ ಶ್ರೀ ಸೂರ್ಯನಾರಾಯಣ ಅಡಿಗ ಅವರು ‘ವಿದೇಶದಿಂದ ಸೊಳ್ಳೆ ತರಿಸಿ ಅವನ್ನು ದೇಶೀಯ ಸೊಳ್ಳೆಯೊಡನೆ ಬೆರೆಸಿದರೆ ಆ  ಮಿಶ್ರ ಸಂತತಿ ಆನೆಕಾಲು ರೋಗವನ್ನು ಹರಡಲಾರದೆಂದು ಗೊತ್ತಾಗಿದೆ’ ಎಂದರು.

* ನಾಗಾರ್ಜುನ ಸಾಗರ: ಎರಡನೆ ಹಂತಕ್ಕೆ ರಾಜ್ಯದ ಪ್ರತಿಭಟನೆ
ಬೆಂಗಳೂರು, ಜೂ. 28–
ನಾಗಾರ್ಜುನ ಸಾಗರ ಯೋಜನೆಯ ಎರಡನೆ ಹಂತದ ಕೆಲಸ ಪ್ರಾರಂಭಿಸುವುದಕ್ಕೆ ಆಂಧ್ರ ಪ್ರದೇಶಕ್ಕೆ ಮೈಸೂರು ಮತ್ತು ಮಹಾರಾಷ್ಟ್ರಗಳಿಗೆ ತಿಳಿಸದೆ ಒಪ್ಪಿಗೆ ನೀಡುವುದಿಲ್ಲವೆಂದು ಕೇಂದ್ರ ಸರಕಾರ ಆಶ್ವಾಸನೆ ನೀಡಿದೆಯೆಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.

ಆಂಧ್ರವು ಎರಡನೇ ಘಟ್ಟದ ಕಾರ್ಯ ಪ್ರಾರಂಭಿಸುವುದಕ್ಕೆ ಮೈಸೂರು ಪ್ರತಿಭಟನೆ ಸಲ್ಲಿಸಿದೆಯೆಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರವಿತ್ತರು.  ಮಹಾರಾಷ್ಟ್ರ ಸರಕಾರವೂ ಅದಕ್ಕೆ ಪ್ರತಿಭಟನೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT