ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಅವಧಿ ವಿಸ್ತರಿಸಲು ರೈತರ ಆಗ್ರಹ

Last Updated 1 ಜುಲೈ 2017, 8:34 IST
ಅಕ್ಷರ ಗಾತ್ರ

ಯಳಂದೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಉದ್ದು, ಹೆಸರು ಬೆಳೆಗಳಿಗೆ ವಿಮೆ ಮಾಡಿಸಲು ಗಡುವು ವಿಸ್ತರಿಸಬೇಕು ಎಂದು ತಾಲ್ಲೂಕು ರೈತ ಸಂಘ ಮನವಿ ಮಾಡಿದೆ.

ಗಡುವು ಜೂನ್‌ 30ಕ್ಕೆ ಮುಗಿದಿದೆ.  ರೈತರಿಗೆ ಅನಾನುಕೂಲವಾಗಿದೆ. ಅವಧಿ ವಿಸ್ತರಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ರೈತ ಸಂಘದ ಕಾರ್ಯಕರ್ತರು ಶುಕ್ರವಾರ ತಹ ಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ಯೋಜನೆ ಮಾಡಿದೆ. ವಿಮೆ ಮಾಡಿಸಲು ಹೊಸ ಆರ್‌ಟಿಸಿ ಪಡೆಯಲು ಗಂಟೆಗಟ್ಟಲೆ ವ್ಯಯಿಸಬೇಕಿದೆ ಎಂದರು.

ತಹಶೀಲ್ದಾರ್ ಚಂದ್ರಮೌಳಿ ಅವರು,  ಪ್ರಸ್ತುತ ಇರುವ ಬೆಳೆ ವಿಮೆಯ ಗಡುವನ್ನು ವಿಸ್ತರಣೆ ಮಾಡಲು  ಜಿಲ್ಲಾಧಿ ಕಾರಿಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಮುಖಂಡ ರಾದ ಸಂತೋಷ, ಶಿವಪ್ರಸಾದ್, ಮಹೇಶ್, ಪುಟ್ಟಬಸಪ್ಪ, ವೀರಣ್ಣ, ಶಿವಣ್ಣ, ದುಂಡಯ್ಯ, ಬಸವಣ್ಣ, ವೃಷಭೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT