ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗಾರರಿಗೆ ‘ಅಡ್ಡ 4 ಪ್ಲಾಂಟಸ್‌’ ನೂತನ ಆ್ಯಪ್‌

Last Updated 7 ಜುಲೈ 2017, 10:14 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಫಿ ಬೆಳೆಗಾರರ ಅನುಕೂಲಕ್ಕೆ ‘ಅಡ್ಡ 4 ಪ್ಲಾಂಟಸ್’ ಎಂಬ ನೂತನ ಮೊಬೈಲ್ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ಬೆಳೆಗಾರರ ಕುಪ್ಪಂಡ ಪಿ. ಮಾಚಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಫಿ, ಏಲಕ್ಕಿ, ಕಾಳು ಮೆಣಸು ಧಾರಣೆ, ಬೆಳೆ ಉತ್ಪನ್ನಗಳಿಗೆ ಉಪಯೋಗಿಸುವ ಉಪಕರಣ, ಸಲಕರಣೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ಸೌಲಭ್ಯಗಳನ್ನು ಬೆಳೆಗಾರರಿಗೆ ಈ ನೂತನ ಆ್ಯಪ್‌ನಿಂದ ಮಾಹಿತಿ ಕಲೆಹಾಕಲು ಸಾಧ್ಯವಿದೆ’ ಎಂದು ತಿಳಿಸಿದರು.

‘ಆ್ಯಪ್‌ನಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಪರಿಶೀಲನೆ, ಹವಾಮಾನದ ಕುರಿತು ಕ್ಷೇತ್ರ ಪರಿಶೀಲನೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪರಿಶೋಧನೆ, ತಾಂತ್ರಿಕ ವಿವರಗಳ ಮಾಹಿತಿ ಪಡೆದುಕೊಳ್ಳಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಮದು ಮತ್ತು ರಫ್ತುಗಳ ವಿವರ, ಸರ್ಕಾರದಿಂದ ಪಡೆಯುವ ಸಹಾಯ ಧನ ಮತ್ತು ನೂತನ ಯೋಜನೆಗಳ ಮಾಹಿತಿಯೂ ಸಿಗಲಿದೆ’ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ ಮೊಬೈಲ್‌: 87621 11624, 96203 65717 ಸಂಪರ್ಕಿಸಬಹುದು. ಇದೇ ಸಂದರ್ಭದಲ್ಲಿ ನೂತನ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಬೋಪಣ್ಣ, ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಿ.ಡಿ. ಮಂಜುನಾಥ್, ಪ್ರಮುಖರಾದ ಪಿ.ಜಿ. ಚೆಂಗಪ್ಪ, ಬೋಸ್ ಮಂದಣ್ಣ, ನಾಣಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT