ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಮಾಹಿತಿ ಕಾರ್ಯಾಗಾರ

ಮುನಿರಾಬಾದ್: ‘ಅರಿವಿನ ಸಿಂಚನ’ ಜಾಗೃತಿ ಸಭೆ
Last Updated 10 ಜುಲೈ 2017, 10:21 IST
ಅಕ್ಷರ ಗಾತ್ರ

ಮುನಿರಾಬಾದ್‌: ಸಮೀಪದ ಬೇವಿನಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಂಗವಿಕಲರಿಗಾಗಿ ‘ಅರಿವಿನ ಸಿಂಚನ’ ಎಂಬ ಸೌಲಭ್ಯಗಳ ಬಗ್ಗೆ ಜಾಗೃತಿ ಸಭೆಯನ್ನು ಈಚೆಗೆ  ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕು ಪಂಚಾಯಿತಿಯ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ ಜಯಶ್ರೀ ಹಿಟ್ನಾಳ ಮಾತನಾಡಿ, ‘ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ, ಚುನಾಯಿತ ಪ್ರತಿನಿಧಿ ಹಾಗೂ ಅಂಗವಿಕಲರು ಮತ್ತು ಪಾಲಕರಿಗೆ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶ.

ಅಂಗ ವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಲ್ಲದೇ ವಿವಿಧ ಇಲಾಖೆಗಳ ಅಡಿ ಕೂಡ ಅಂಗವಿಕಲರಿಗೆ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡಿದೆ’ ಎಂದರು.

‘ರಿಯಾಯಿತಿ ದರದ ಬಸ್‌ಪಾಸ್‌, ಹೊಲಿಗೆಯಂತ್ರ, ವಸತಿ ಯೋಜನೆ, ಗಾಲಿಖುರ್ಚಿ, ತ್ರಿಚಕ್ರ ಬೈಕ್‌, ಶ್ರವಣದೋಷ, ದೃಷ್ಟಿದೋಷವುಳ್ಳವರು ಸಾಧನ ಸಲಕರಣೆಗಳನ್ನು ಪಡೆಯಬಹುದು. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಅನುದಾನದ ಶೇ3ರಷ್ಟು ಅನುದಾನವನ್ನು ಅಂಗವಿಕಲರಿಗೆ ಮೀಸಲಿಡುವುದು, ಉನ್ನತ ಶಿಕ್ಷಣಕ್ಕೆ ಆದ್ಯತೆ ಮುಂತಾದ ಸೌಲಭ್ಯಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಮಾಹಿತಿ ಹೊಂದಿರಬೇಕು’ ಎಂದು ಹೇಳಿದರು.

‘ಮಾಹಿತಿ ಕೊರತೆಯಿಂದ ಕೆಲವು ಬಾರಿ ಅನುದಾನ ದುರುಪಯೋಗ ವಾಗುವ ಸಾಧ್ಯತೆ ಇದೆ. ಅಂಗವಿಕಲರು, ಅವರ ಪಾಲಕರು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸೌಲಭ್ಯಗಳ ಸದುಪಯೋಗ ಪಡೆಯಬೇಕು.

ಅಂಗವಿಕಲ ತೆಯ ಕಾರಣ ಮುಂದುಮಾಡಿ ಕಲಿಕೆಯನ್ನು ನಿಲ್ಲಿಸ ಬಾರದು. ಈಚೆಗೆ ಜಾರಿಗೆ ಬಂದಿರುವ ‘ಕೌಶಲ ಅಭಿವೃದ್ಧಿ ಯೋಜನೆ’  ಅಡಿ ಅಂಗವಿಕಲರಿಗಾಗಿ ಹಲವು ಕ್ಷೇತ್ರಗಳಲ್ಲಿ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಅವಕಾಶವಿದೆ’ ಎಂದು ತಿಳಿಸಿದರು.

‘ಚುನಾಯಿತ ಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆ ಹಾಗೂ ಪಾಲಕರು ಮಕ್ಕಳಲ್ಲಿ ಕಂಡುಬರುವ ವಿಕಲತೆಯ ಲಕ್ಷಣಗಳನ್ನು ಆರಂಭದಲ್ಲಿ ಗುರುತಿಸಿ ಚಿಕಿತ್ಸೆ ನೀಡಬೇಕು. ಇದರಿಂದ ಶಾಶ್ವತ ಅಂಗವಿಕಲತೆಯಿಂದ ಮಕ್ಕಳನ್ನು ಪಾರು ಮಾಡಬಹುದು. ಉನ್ನತ ಶಿಕ್ಷಣದಲ್ಲಿ ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹಧನ ಸೌಲಭ್ಯಕೂಡ ಪಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT