ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯಸಭೆಯಲ್ಲಿ ಡೆಂಗಿ ಪ್ರಕರಣದ ಸದ್ದು

ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ: ಸದಸ್ಯರ ಆಕ್ರೋಶ
Last Updated 11 ಜುಲೈ 2017, 10:55 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಸೇರಿದಂತೆ ಸೋಂಕು ಜ್ವರದ ಭೀತಿ ಹೆಚ್ಚಾಗುತ್ತಿದೆ. ಸಾರ್ವಜನಿಕರು ಆತಂಕಗೊಂಡಿದ್ದಾರೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ?

ನಗರಸಭೆ ಪ್ರಭಾರ ಅಧ್ಯಕ್ಷ ಆರ್.ಎಂ. ರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು.

ಸದಸ್ಯ ನಾರಾಯಣಸ್ವಾಮಿ, ನಗರದೆಲ್ಲೆಡೆ ಸೋಂಕು ಜ್ವರದ ಹಾವಳಿ ಹೆಚ್ಚುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ಕುರಿತು ನಗರಸಭೆ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.

ಚರಂಡಿ ಸ್ವಚ್ಛಗೊಳಿಸಿಲ್ಲ ಎಂದು ಮಾಧ್ಯಮಗಳಲ್ಲಿ ವಿಡಿಯೊ, ಚಿತ್ರಗಳು ಪ್ರಕಟವಾಗುತ್ತಿವೆ. ಯಾಕೆ ಸರಿಪಡಿಸು ತ್ತಿಲ್ಲ? ಕೆಲ ಕಾರ್ಮಿಕರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ನಂಜುಂಡಸ್ವಾಮಿ ಒತ್ತಾಯಿಸಿದರು.

ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ಸ್ವಚ್ಛತೆ ಕಾರ್ಯ ವ್ಯವಸ್ಥಿತವಾಗಿ ಆಗುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ಚರಂಡಿಯಲ್ಲಿ ಕಸ ತುಂಬಿ ನೀರು ನಿಂತಿದೆ. ಫಾಗಿಂಗ್‌ ಸರಿಯಾಗಿ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು.

ನಿತ್ಯ ಎರಡು ವಾರ್ಡ್‌ ಸ್ವಚ್ಛ: ನಗರದ ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗುತ್ತಿದೆ. ಮಂಗಳವಾರದಿಂದ ಪ್ರತಿದಿನ 2 ವಾರ್ಡ್‌ಗಳಿಗೆ ತಲಾ 30 ಪೌರ ಕಾರ್ಮಿಕರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂಪೂರ್ಣ ಸ್ವಚ್ಛಗೊಳಿಸ ಲಾಗುವುದು. ಪ್ರತಿನಿತ್ಯ 2 ಬಾರಿ ಫಾಗಿಂಗ್‌ ಮಾಡಲು ಸೂಚಿಸಲಾಗು ವುದು ಎಂದು ಪೌರಾಯುಕ್ತ ಎಂ.ರಾಜಣ್ಣ  ತಿಳಿಸಿದರು.

ನಗರಸಭೆಯಲ್ಲಿ 3 ಫಾಗಿಂಗ್‌ ಯಂತ್ರ ಮಾತ್ರ ಇವೆ. ಆಟೊ ಫಾಗಿಂಗ್‌ ಯಂತ್ರವನ್ನು ತರಿಸಲು ಪ್ರಯತ್ನಿಸ ಲಾಗುತ್ತಿದೆ. ಈ ಯಂತ್ರ ಬಂದ ಬಳಿಕ 2,000 ಲೀಟರ್‌ ಔಷಧಿಯನ್ನು ಒಂದು ದಿನಕ್ಕೆ ಸಿಂಪಡಿಸಬಹುದು ಎಂದರು.

ಸದಸ್ಯ ಗೋಪಾಲಕೃಷ್ಣ , ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಹೆದ್ದಾರಿ ಹಾಗೂ ಚರಂಡಿ ಕಾಮಗಾರಿಯಲ್ಲಿ ಚರಂಡಿಯನ್ನು 1 ಮೀಟರ್‌ ಎತ್ತರಿಸಿದೆ. ಹೀಗಾಗಿ,  ಸಂಪಿಗೆ ರಸ್ತೆಯಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂದು ದೂರಿದರು.

ಪೌರಾಯುಕ್ತ ರಾಜಣ್ಣ ಪ್ರತಿಕ್ರಿಯಿಸಿ, ಸಂಪಿಗೆ ರಸ್ತೆಯ 2ನೇ ಅಡ್ಡರಸ್ತೆಯ ಮೂಲಕ ಎಸ್‌ಬಿಐ ಬ್ಯಾಂಕ್‌ನ ಹಿಂಭಾಗದ ಚರಂಡಿಗೆ ಸಂಪರ್ಕ ಕಲ್ಪಿಸಿ ಸರಿ ಪಡಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಮಾಂಸದ ಕೆಲ ಅಂಗಡಿ ಮಾಲೀಕರು ಸ್ವಚ್ಛತೆಗೆ ಒತ್ತು ನೀಡದೇ ರಸ್ತೆಬದಿಯಲ್ಲಿ ಮಾರುತ್ತಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಚೆಂಗುಮಣಿ ಒತ್ತಾಯಿಸಿದರು.

ಸದಸ್ಯ ಸಿ.ಎಸ್. ಸೈಯದ್‌ ಆರೀಫ್‌, ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್‌ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಬೇಕು ಎಂದರು.
ಫ್ಲೆಕ್ಸ್‌ ಮುಕ್ತ ನಗರಕ್ಕೆ ಒತ್ತಾಯ: ನಗರವನ್ನು ಫ್ಲೆಕ್ಸ್‌ ಮುಕ್ತಗೊಳಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್‌ ಹಾಕಿದವರಿಗೆ ದಂಡ ವಿಧಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರದಲ್ಲಿ ಫ್ಲೆಕ್ಸ್‌ ಹಾವಳಿ ಹೆಚ್ಚುತ್ತಿದೆ. ರಾಜಕೀಯ ಮುಖಂಡರು ಭೇಟಿ ನೀಡಿದಾಗ ನಗರಸಭೆ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌ ಹಾಕಲಾಗುತ್ತಿದೆ. ಇದನ್ನು ತಡೆಯಬೇಕು. ಫ್ಲೆಕ್ಸ್‌ ಹಾಕಲು ನಿರ್ದಿಷ್ಟ ಸ್ಥಳ ಗುರುತಿಸಬೇಕು.

***

ಕೇಂದ್ರ ಸರ್ಕಾರದ ವಸತಿ ಯೋಜನೆಗಳ ಅಡಿ 2017–18ನೇ ಸಾಲಿನಲ್ಲಿ ಚಾಮರಾಜನಗರ ನಗರಸಭೆಗೆ ಒಟ್ಟು 357 ಮನೆಗಳು ಮಂಜೂರಾಗಿವೆ.
ಪ್ರಸಕ್ತ ವರ್ಷ ಮಂಜೂರಾಗಿರುವ ಮನೆಗಳ ವಿವರ
ಅಂಬೇಡ್ಕರ್‌ ವಸತಿ ಯೋಜನೆ
4ಮಂಜೂರಾಗಿರುವ ಒಟ್ಟು ಮನೆ – 297
4ಪರಿಶಿಷ್ಟ ಜಾತಿಗೆ – 133
4ಪರಿಶಿಷ್ಟ ಪಂಗಡಕ್ಕೆ – 164
ವಾಜಪೇಯಿ ನಗರ ವಸತಿ ಯೋಜನೆ
4ಮಂಜೂರಾಗಿರುವ ಒಟ್ಟು ಮನೆ – 60
4ಅಲ್ಪ ಸಂಖ್ಯಾತರಿಗೆ – 10
4ಹಿಂದುಳಿದ ವರ್ಗದವರಿಗೆ – 50

ಜನಸಂದಣಿ ಪ್ರದೇಶದಲ್ಲಿ ಫ್ಲೆಕ್ಸ್‌ ಹಾಕಿದರೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ರಾಜೇಶ್‌ ಮತ್ತು ಚಿನ್ನಸ್ವಾಮಿ ಆಗ್ರಹಿಸಿದರು. ಪ್ರಭಾರ ಅಧ್ಯಕ್ಷ ಆರ್.ಎಂ.ರಾಜಪ್ಪ, ಫ್ಲೆಕ್ಸ್‌ಗಳನ್ನು ಕಾರ್ಯಕ್ರಮ ಸ್ಥಳದ ವ್ಯಾಪ್ತಿಯಲ್ಲಿ ಮಾತ್ರ ಹಾಕಬೇಕು. ಶುಚಿತ್ವ ಕಾಪಾಡಲು ನಾಗರಿಕರು ಒತ್ತು ನೀಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT