ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳ ಅಭಿವೃದ್ಧಿಗೆ ಪ್ರಯತ್ನ: ಶಾಸಕ

Last Updated 14 ಜುಲೈ 2017, 6:59 IST
ಅಕ್ಷರ ಗಾತ್ರ

ಯಾದಗಿರಿ: ‘ಗುರುಮಠಕಲ್ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಾಂಡಾಗಳ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿ ಸಲು ಆದ್ಯತೆ ನೀಡಲಾಗಿದೆ’ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು. ತಾಲ್ಲೂಕಿನ ಸಮನಾಪುರ ತಾಂಡಾ ದಲ್ಲಿ ಕೆಬಿಜೆಎನ್‌ಎಲ್‌ನ ಎಸ್‌ಸಿಪಿ ಯೋಜನೆಯಡಿ ₹10ಲಕ್ಷ ವೆಚ್ಚದ ಸಿಸಿರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಮತಕ್ಷೇತ್ರದ ಹಲವು ಗ್ರಾಮಗಳಲ್ಲಿ ಈ ಯೋಜನೆಯಡಿಯಲ್ಲಿ ₹10 ಕೋಟಿ ವೆಚ್ಚ ಮಾಡಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಭೀಮಾ ನದಿಯಿಂದ ಮತಕ್ಷೇತ್ರದ 35ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹440 ಕೋಟಿ ಮೀಸಲಿಟ್ಟಿದೆ.

ಅದರಂತೆ ಯರಗೋಳ ಕೆರೆ ಅಭಿ ವೃದ್ಧಿಗೆ ₹66 ಕೋಟಿ ಅನುದಾನ ಕಲ್ಪಿಸ ಲಾಗಿದೆ. ಒಂದು ವರ್ಷದೊಳಗೆ ರೈತರ ನೂರಾರು ಹೆಕ್ಟೇರ್ ಜಮೀನು ನೀರಾವರಿ ಕ್ಷೇತ್ರವಾಗಿ ಮಾರ್ಪಡಲಿದೆ’ ಎಂದರು.

‘ಗುರುಮಠಕಲ್ ಪಟ್ಟಣ ಈಗಾಗಲೇ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷ ಣೆಯಾಗಿದೆ. ಅದರ ಅಭಿವೃದ್ಧಿಗೆ ಪೂರಕ ಯೋಜನೆ ತಯಾರಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿ, ಪಂಗಡದ ನೂರಾರು ರೈತರ ಜಮೀನಿನಲ್ಲಿ ಈ ವರ್ಷ ₹10 ಕೋಟಿ ವೆಚ್ಚದಲ್ಲಿ ಬೋರವೆಲ್‌ ಕೊರೆ ಯಿಸಲಾಗಿದೆ’ ಎಂದು ವಿವರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಅಗತ್ಯ ಯೋಜನೆಗಳನ್ನು ಜಾರಿಗೆ ತಂದಿ ದ್ದಾರೆ. ರೈತರ ಸಂಕಷ್ಟವನ್ನು ಅರಿತು ಅವರ ಸಾಲವನ್ನು ಮನ್ನಾ ಮಾಡುವ ಮೂಲಕ ಚೆತನ್ಯ ತುಂಬಿದ್ದಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಬಾಷು ರಾಠೋಡ ಮಾತನಾಡಿ, ‘ತಾಂಡಾಕ್ಕೆ ಶಾಸಕರು ಈಗಾಗಲೇ ₹25ಲಕ್ಷ ವೆಚ್ಚದಲ್ಲಿ ನೀರು ಸಂಗ್ರಹ ಘಟಕ, ₹11ಲಕ್ಷ,  ಸೇವಾಲಾಲ್ ಭವನ ನಿರ್ಮಾಣ₹10 ಲಕ್ಷ ಅನುದಾನ ಅಂಗನ ವಾಡಿ ಕೇಂದ್ರಕ್ಕೆ, ಶೇ10ಲಕ್ಷ  ಶಾಲಾ ಕಟ್ಟಡಕ್ಕೆ, ₹ 25ಲಕ್ಷ  ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿ ಪ್ರಗತಿಗೆ ಒತ್ತು ನೀಡಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವ ಲಿಂಗಪ್ಪ ಪುಟಗಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭಗವಂತರೆಡ್ಡಿ ಕೊಂಕಲ್, ಹಣಮಂತ ಚಾಮನಳ್ಳಿ, ಹಣಮಂತ ಅಚ್ಚೋಲಾ, ಬಸವರಾಜಪ್ಪ ನಾಯಕ, ಪರಶುರಾಮ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT