ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಸ್ಮಶಾನ ಜಾಗ ವಶಕ್ಕೆ ನೀಡಲು ಆಗ್ರಹ

Last Updated 14 ಜುಲೈ 2017, 9:33 IST
ಅಕ್ಷರ ಗಾತ್ರ

ನಿಡಗುಂದಿ: ಪಟ್ಟಣದ ಹಳೇ ಬಸ್‌ ನಿಲ್ದಾಣದ ಸಮೀಪ ದಲಿತರಿಗೆ ಸೇರಿದೆ ಎನ್ನಲಾದ ಜಮೀನಿನಲ್ಲಿ ಅನ್ಯ ಕೋಮಿ ನವರು ಸ್ಮಶಾನ ಭೂಮಿಗೆ ಬಳಸಿಕೊಳ್ಳು ತ್ತಿದ್ದಾರೆ ಎಂದು ಆರೋಪಿಸಿ, ದಲಿತರು ಗುರುವಾರದಿಂದ ವಿವಾದಿತ ಸ್ಥಳದ ಸಮೀಪ ಸರದಿ ಸತ್ಯಾಗ್ರಹ ಆರಂಭಿಸಿದರು.

ಪಟ್ಟಣದ ದ್ಯಾಮವ್ವನ ಗುಡಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನ್ಯಾಯದ ವಿರುದ್ಧ ಘೋಷಣೆ ಕೂಗಿದರು. ನಂತರ ವಿವಾದಿತ ಸ್ಥಳದ ಹತ್ತಿರ ಹಾಕ ಲಾಗಿರುವ ವೇದಿಕೆಗೆ ತೆರಳಿದ ಪ್ರತಿಭಟ ನಾಕಾರರು ಧರಣಿ ಆರಂಭಿಸಿದರು.

ಮುಖಂಡರಾದ ಬಸವರಾಜ ಹೊಸಮನಿ, ಶ್ರೀನಿವಾಸ ಭೈರವಾಡಗಿ, ತಿಪ್ಪಣ್ಣ ಮಾದರ, ಶಂಕರ ವಡವಡಗಿ, ಆನಂದ ಮಂಕಣಿ ಮೊದಲಾದವರು ಮಾತನಾಡಿ, ಪಟ್ಟಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಗಾಯಿರಾಣ ಜಮೀನು ಕ.ಸ.ನಂ 10 ಜಮೀನಿನಲ್ಲಿ 16 ಎಕರೆ 10 ಗುಂಟೆ ಜಮೀನಿದ್ದು, ಅದರಲ್ಲಿ ಖರಾಬ್ (ಅ), (ಬ) 5 ಎಕರೆ 5 ಗುಂಟೆ ಇದ್ದು, ಅದರಲ್ಲಿ ಹೊಲೇರ ಕೆರೆ, ಬಾವಿ ಹಾಗೂ ಮಾದರ ಬಾವಿ, ಮಚಗಾರ ಬಾವಿ ಇದ್ದು, ಅವುಗಳನ್ನು 1955 ರಿಂದ ಉಪಯೋಗ ಮಾಡಿಕೊಂಡು ಬರಲಾಗಿರುತ್ತದೆ.

ಆದರೆ ಈ ಗಾಯಿರಾಣ ಜಮೀನನಲ್ಲಿ ಅನ್ಯ ಕೋಮಿಗೆ 11 ಎಕರೆ 5 ಗುಂಟೆ ಸ್ಮಶಾನ ಅಂತಾ ಕೊಟ್ಟಿರುತ್ತಾರೆ,  ಅದರಲ್ಲಿ 3 ಎಕರೆ 17 ಗುಂಟೆ ಜಾಗವನ್ನು ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಸ್ವಾಧೀನಪಡಿಸಿಕೊಂಡಿದ್ದು, ಉಳಿದ 7 ಎಕರೆ 18 ಗುಂಟೆ ಜಾಗ ಅನ್ಯ ಕೋಮಿನ ಸ್ಮಶಾನಕ್ಕೆ ಉಳಿದಿದೆ. ಆದರೆ ಆ ಅನ್ಯ ಕೋಮಿನವರು ಇಡೀ ಜಾಗ ನಮ್ಮದು ಎಂದು ಹೇಳುತ್ತಾ ಸ್ಮಶಾನ ನಿರ್ಮಿಸುತ್ತಿದ್ದಾರೆ.

ಪಂಚಮರಲ್ಲಿಯೇ ಮೂರು ವರ್ಗಕ್ಕೆ ಸೇರಿದ 5 ಎಕರೆ 5 ಗುಂಟೆ ಜಾಗವನ್ನು ಸರ್ವೆ ಮಾಡಿ, ನಿಗದಿಗೊಳಿಸಿ ಅದಕ್ಕೆ ತಂತಿ ಬೇಲಿ ಹಾಕಿಸಿ ಕೊಡಬೇಕು, ಅಲ್ಲಿಯವರೆಗೂ ನಮ್ಮ ಧರಣಿ ನಿರಂತರ ನಡೆಯಲಿದೆ ಎಂದು ಎಚ್ಚರಿಸಿದರು. 

ಬೆಂಬಲ: ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ನಿಡಗುಂದಿ ಘಟಕದ ಅಧ್ಯಕ್ಷ ಪ್ರಹ್ಲಾದ ಪತ್ತಾರ, ದಲಿತರ ಬೇಡಿಕೆ ಸಮರ್ಪಕವಾಗಿದ್ದು, ಶುಕ್ರವಾರ ಕರವೇ ಕಾರ್ಯಕರ್ತರು ಮೆರವಣಿಗೆ ಮೂಲಕ ಬಂದು ಧರಣಿಗೆ ಬೆಂಬಲ ಸೂಚಿಸುವು ದಾಗಿ ತಿಳಿಸಿದರು.

ಬಿಗಿ ಬಂದೋಬಸ್ತ್: ಗುಂಪು ಘರ್ಷಣೆ ಉಂಟಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಸಿಪಿಐ ನೇತೃತ್ವ ದಲ್ಲಿ ಇಬ್ಬರು ಪಿಎಸ್ಐ ಸೇರಿದಂತೆ 40ಕ್ಕೂ ಅಧಿಕ ಪೊಲೀಸರು ಸ್ಥಳದಲ್ಲಿ ಇದ್ದರು.

ಎಸ್.ಪಿ.ಬಿದ್ನಾಳ, ಎಂ.ಸಿ.ವಡ ವಡಗಿ, ವಿ.ಡಿ.ಹೊಳೆಯಣ್ಣವರ, ಸಿಂಧೂರ ಭೈರವಾಡಗಿ, ಎಲ್.ಡಿ.ಚಳ್ಳ ಮರದ, ಪಿ.ಡಿ.ಗುಡಿಮನಿ, ಎಲ್.ಬಿ. ಅಮೀನಪ್ಪಗೋಳ, ಅಜಯ ಧನ ಗಾಂವಿ, ವಿಜಯಕುಮಾರ ಗುಂಡಿನಮನಿ, ಆರ್.ಎನ್.ಚಳ್ಳಮರದ, ಪ್ರಶಾಂತ ಚಲವಾದಿ, ಶೇಖರ ದೊಡ ಮನಿ, ಬಸಪ್ಪ ಆಲಕೊಪ್ಪರ, ಲಕ್ಷ್ಮಣ ಗುಂಡಿಮನಿ, ಬಸಪ್ಪ ಕೆಂಭಾವಿ, ರುದ್ರಪ್ಪ ಮುಂಡೇವಾಡಿ, ಶಿವಪ್ಪ ಕರಿಯಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT