ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಜುಲೈ 30ರ ಒಳಗೆ ನೋಂದಣಿಗೆ ಸೂಚನೆ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 30ರ ಒಳಗೆ ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ವರ್ತಕರಿಗೆ ಸೂಚನೆ ನೀಡಿದೆ.

ಕೊನೆಯ ಕ್ಷಣದವರೆಗೆ ಕಾಯದೆ ಆದಷ್ಟು ಬೇಗ ನೋಂದಣಿ ಆಗುವು ದರಿಂದ ವರ್ತಕರಿಗೆ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ ಲಾಭ ಪಡೆಯಲು ಸುಲಭವಾಗಲಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

₹20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ವರ್ತಕರು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಜಿಎಸ್‌ಟಿಎನ್‌ಗೆ ವಲಸೆ ಬಂದು ತಾತ್ಕಾಲಿಕ ಗುರುತಿನ ಸಂಖ್ಯೆ ಪಡೆದಿರುವ  ಅಬಕಾರಿ, ವ್ಯಾಟ್‌ ಅಥವಾ ಸೇವಾ ತೆರಿಗೆ ಪಾವತಿದಾರರಿಗೆ, ಎಲ್ಲಾ ದಾಖಲೆಪತ್ರಗಳನ್ನು ನೀಡುವ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್‌ 22ರವರೆಗೆ ಅವಕಾಶ ನೀಡಲಾಗಿದೆ.

ಜಿಎಸ್‌ಟಿಎನ್‌ಗೆ ವಲಸೆ ಬರಲು ಜುಲೈ 22ರ ಗಡುವು ನೀಡಲಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟ ಇಲ್ಲದೇ ಇರುವವರಿಗೆ ತಮ್ಮ ನೋಂದಣಿ ರದ್ದುಪಡಿಸಿಕೊಳ್ಳಲು ಜುಲೈ 22ರವರೆಗೆ ಅವಕಾಶವಿದೆ  ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT