ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

96 ಅಭ್ಯರ್ಥಿಗಳಿಗೆ ನೇಮಕ ಆದೇಶ ಪತ್ರ

Last Updated 16 ಜುಲೈ 2017, 6:02 IST
ಅಕ್ಷರ ಗಾತ್ರ

ತುಮಕೂರು: ವಿಶ್ವ ಕೌಶಲ್ಯ ದಿನಾಚರಣೆ ಪ್ರಯುಕ್ತ ನಗರದ ಎಂಪ್ರೆಸ್‌ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ   ಶನಿವಾರ ನಡೆದ ಬೃಹತ್‌ ಉದ್ಯೋಗ ಮೇಳದಲ್ಲಿ 96 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡರು. ಉದ್ಯೋಗಾಧಿಕಾರಿ ವಿ.ಎಂ.ಗಲಿಗಲಿ ಮಾತನಾಡಿ, ಉದ್ಯೋಗ ವಿನಿಮಯ ಕಚೇರಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ನೆರವು ನೀಡುತ್ತಿದೆ ಎಂದರು.

ಮೇ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೌಶಲ್ಯ ಡಾಟ್‌ ಕಾಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಿಂದ  ಉದ್ಯೋಗ ಮತ್ತು ಕೌಶಲ ತರಬೇತಿಗಳನ್ನು ನೀಡಲಾಗುತ್ತಿದೆ. ಇಲಾಖೆಯು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಪ್ರತಿ 2ರಿಂದ 3 ತಿಂಗಳಿಗೊಮ್ಮೆ ಉದ್ಯೋಗ ಮೇಳ ನಡೆಸುತ್ತಿದ್ದು ಯಾವುದೇ ಶುಲ್ಕ ಪಡೆಯದೇ ಉಚಿತ ಪ್ರವೇಶ ಸೌಕರ್ಯ ನೀಡುತ್ತಿದ್ದೇವೆ ಎಂದರು.

ಕೌಶಲ ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಕಚೇರಿಯ ಎಲ್ಲ  ಕೆಲಸದ ದಿನದಂದು ಅವಕಾಶವಿರುತ್ತದೆ ಎಂದರು. ಉದ್ಯೋಗ ಮೇಳದಲ್ಲಿ  850 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇನ್‌ಕ್ಯಾಪ್‌ ಇಂಡಿಯಾ ಪ್ರೈ ಲಿಮಿಟೆಡ್‌, ಚಾಮುಂಡಿ ಡೈ ಕಾಸ್ಟ್‌, ಪ್ರಿಮೀಯರ್‌ ಮಾರ್ಕೆಟಿಂಗ್‌, ಟೊಯೊಟೆಟ್ಸು, ಎಕ್ಸೈಡ್‌ ಲೈಫ್‌ ಇನ್ಸೂರೆನ್ಸ್‌, ಜಿಯೊಎಡ್ಜ್‌, ಇಂಡೋ– ಎಮ್‌ಐಎಮ್‌, ಟೊಯೋಟ– ಕಿರ್ಲೋಸ್ಕರ್‌, ಟ್ಯಾಲೆಂಟ್‌ಪ್ರೊ ಇಂಡಿಯಾ ಸೇರಿ 19 ಕಂಪೆನಿಗಳು ಭಾಗವಹಿಸಿದ್ದವು. ಎಸ್ಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐ.ಟಿ.ಐ ಮತ್ತು ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT