ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವೇಶ್ವರ ಏತ ನೀರಾವರಿ ಅಕ್ಟೋಬರ್‌ನಲ್ಲಿ ಪೂರ್ಣ’

Last Updated 16 ಜುಲೈ 2017, 10:07 IST
ಅಕ್ಷರ ಗಾತ್ರ

ರಾಮದುರ್ಗ: ಸಾಲಾಪೂರ ಭಾಗದ ಜನತೆಯ ಬಹುದಿನದ ಕನಸಾಗಿದ್ದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಅಕ್ಟೋಬರ್‌ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಿಲಿದೆ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು. ತಾಲ್ಲೂಕಿನ ವೆಂಕಟಾಪುರದಿಂದ ಸಾಲಾಪುರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ₹1.30 ಕೋಟಿ ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಸವೇಶ್ವರ ಏತ ನೀರಾವರಿ ಯೋಜನೆಗಾಗಿ ₹560 ಕೋಟಿ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಇದರಿಂದ ಸಾಲಾಪುರ ವ್ಯಾಪ್ತಿಯ ಸುಮಾರು 22 ಗ್ರಾಮಗಳು ನೀರಾವರಿ ಪ್ರದೇಶಗಳಾಗಲಿವೆ. ಬಹುತೇಕ ಕಷ್ಟದಲ್ಲಿ ಕಾಲ ಕಳೆದ ರೈತರ ಬದುಕು ಹಸನಾಗ ಲಿದೆ ಎಂದು ಹೇಳಿದರು.

ತಾಲ್ಲೂಕಿನ ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ ಕಾಲುವೆ ಮಾರ್ಗದ ಸಮೀಕ್ಷೆ ಈಗಾಗಲೇ ಪೂರ್ಣ ಗೊಂಡಿದೆ. ಕಾಮಗಾರಿಯನ್ನು ತ್ವರಿತ ವಾಗಿ ಪೂರ್ಣಗೊಳಿಸಿದಾಗ ಹುಲಕುಂದ ಭಾಗದ ರೈತರಿಗೂ ನೀರಾವರಿ ಲಭಿಸ ಲಿದೆ. ಇದರಿಂದಾಗಿ ತಾಲ್ಲೂಕಿನ ಒಟ್ಟು 50 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ವೆಂಕಟಾಪುರ ಗ್ರಾಮದ ಮಹಿಳೆ ಯರಿಗೆ ಶೌಚಾಲಯ, ಗ್ರಾಮದ ಒಳ ರಸ್ತೆಗಳ ಸುಧಾರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು. ಸಾಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮಶೇಖರ ಹಂಪಣ್ಣವರ ಮಾತನಾಡಿ, ತಾಲ್ಲೂಕಿನ  ಈ ಹಿಂದಿನ ಎಲ್ಲ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಇಂದಿನ ಶಾಸಕ ರಾದ ಅಶೋಕ ಪಟ್ಟಣ ಅವರು ತಮ್ಮ ಎರಡು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣ ಲಮಾಣಿ, ರಾಮದುರ್ಗ ಪುಸಭೆಯ ಮಾಜಿ ಅಧ್ಯಕ್ಷ ಶಿವಯೋಗಿ ಚಿಕ್ಕೋಡಿ, ಎಪಿಎಂಸಿ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸದಾಶಿವ ಮಾತನವರ, ಹನಮಂತ ಬಸರಗಿ, ಹನಮಂತ ಗೊರವನಕೊಳ್ಳ, ಮಹಾಂತೇಶ ಉಮ ತಾರ, ಜಿಲ್ಲಾ ಪಂಚಾಯ್ತಿ ಎಇಇ ಖಾನಾ ಪುರಿ, ಎಇ ಬಸವರಾಜ ಕರ್ಕಿ ಇದ್ದರು. ಚನ್ನಬಸು ಹಂಪನ್ನವರ ಸ್ವಾಗತಿಸಿದರು. ಶಿವಾನಂದ ಲಗಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT