ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಮರಗಳ ಮಾರಣಹೋಮ

Last Updated 17 ಜುಲೈ 2017, 7:50 IST
ಅಕ್ಷರ ಗಾತ್ರ

ಹರಿಹರ: ಇಲ್ಲಿನ ಜೆ.ಸಿ.ಬಡಾವಣೆಯ 4ನೇ ಮುಖ್ಯ ರಸ್ತೆಯ ಗಿರಿಯಮ್ಮ ಕಾಲೇಜಿನ ಕಟ್ಟಡಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ನಗರಸಭೆಯಿಂದ ಐದು ಮರಗಳನ್ನು ಕಡಿಯಲು ಅನುಮತಿ ಪಡೆದಿದ್ದ ಆಡಳಿತ ಮಂಡಳಿಯು, ಒಂಬತ್ತು ಮರಗಳನ್ನು ಕಡಿದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜಿನ ಪ್ರಾಂಶುಪಾಲ ಎಸ್‌.ಎಚ್‌.ಪ್ಯಾಟಿ ಅವರು ಆಡಳಿತ ಮಂಡಳಿ ಪರವಾಗಿ ಅರಣ್ಯ ಇಲಾಖೆ ಹಾಗೂ ನಗರಸಭೆಯಿಂದ ಐದು ಮರಗಳ

 ಕಡಿಯಲು ಪರವಾನಗಿ ಪಡೆದುಕೊಂಡಿದ್ದರು.  ‘ಈ ಮರಗಳು ಗಾಳಿ ಹಾಗೂ ನೆರಳು ನೀಡುತ್ತಿದ್ದವು. ವೈಯಕ್ತಿಕ ಹಿತಾಸಕ್ತಿ ಗಳಿಗೆ ಮರ ಕಡಿಯಲು ಅನುಮತಿ ನೀಡಿದರೆ, ನಗರದಲ್ಲಿ ಮರಗಳೇ ಇಲ್ಲದ ಪರಿಸ್ಥಿತಿ ಬರಬಹುದು ’ ಎಂದು ನಗರದ ನಿವಾಸಿ ಮಂಜುನಾಥ ಪ್ರತಿಕ್ರಿಯಿಸಿದ್ದಾರೆ.

‘ಪರಿಸರ ನಾಶದಿಂದ ಮಳೆ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಮರ ಕಡಿಯಲು ಅನುಮತಿ ನೀಡಿರುವ ಅಧಿಕಾರಿಗಳ ಕ್ರಮ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಹೊನ್ನಪ್ಪ ದೂರಿದ್ದಾರೆ.

‘ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ಮರಗಳನ್ನು ಕಡಿದಿರುವು ದರಿಂದ ಗುತ್ತಿಗೆದಾರನಿಂದ ಮರ ಕಡಿಯುವ ಸಾಮಗ್ರಿಗಳನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಲು ಅಧಿಕಾರಿ ಗಳಿಗೆ ಸೂಚಿಸಿದ್ದೇನೆ’ ಎಂದು ನಗರಸಭೆ ಆಯುಕ್ತೆ ಎಸ್‌. ಲಕ್ಷ್ಮೀ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT