ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಸಂತೆ ವ್ಯಾಪಾರ ಅಸ್ತವ್ಯಸ್ತ

Last Updated 19 ಜುಲೈ 2017, 9:03 IST
ಅಕ್ಷರ ಗಾತ್ರ

ಕೆರೂರ: ಮಂಗಳವಾರ ಬೆಳಗಿನಿಂದ ರಾತ್ರಿಯವರೆಗೆ ದಿನವಿಡೀ ಜಿಟಿಜಿಟಿಯಾಗಿ ಸುರಿದ ಪುನರ್ವಸು ಮಳೆಯು ಕೃಷಿಕರಲ್ಲಿ ಸಂತಸ ಮೂಡಿಸಿದರೆ, ವಾರದ ಸಂತೆಯ ವಹಿವಾಟು ಸಂಪೂರ್ಣ ಅಸ್ತವ್ಯಸ್ತ್ಯಗೊಂಡು ಗ್ರಾಹಕರು, ವರ್ತಕರನ್ನು ಕಂಗೆಡಿಸಿತು.

ಪಟ್ಟಣದಲ್ಲಿ ನಡೆದ ವಾರದ ಜಾನುವಾರು, ಕುರಿ ಹಾಗೂ ತರಕಾರಿ ಸಂತೆಯ ವಹಿವಾಟಿಗೆ ದಿನವಿಡೀ ಎಡೆಬಿಡದೇ ಸುರಿದ ಮಳೆಯು ಸ್ವಲ್ಪ ತೊಡಕುಂಟು ಮಾಡಿತು. ತರಕಾರಿ, ಕಿರಾಣಿ ಇತರೆ ಆಹಾರ ಪದಾರ್ಥಗಳು ನೀರಿನಲ್ಲಿ ತೊಯ್ದವು.

ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಪದಾರ್ಥಗಳು ಸಂಜೆಯ ವೇಳೆ ಜೋರಾದ ಮಳೆ ನೀರಲ್ಲಿ ತೇಲುತ್ತಿದ್ದುದು ಕಂಡು ಬಂದಿತು. ವರ್ತಕರು ಅವುಗಳ ರಕ್ಷಣೆಗಾಗಿ ಪರದಾಡುತ್ತಿದ್ದರು. ಕೆಲವರು ಪ್ಲಾಸ್ಟಿಕ್ ಹಾಳೆಗಳ ನೆರವಿನಿಂದ ಕಿರಾಣಿ, ತರಕಾರಿ ವಸ್ತುಗಳನ್ನು ರಕ್ಷಿಸಿಕೊಳ್ಳುವಲ್ಲಿ ಮುಂದಾದರು. ಆದರೆ ಬಹುತೇಕ ಪದಾರ್ಥಗಳು, ಹಸಿ ತರಕಾರಿ, ಈರುಳ್ಳಿ ನೀರಿನಲ್ಲಿ ತೊಯ್ದು ಹೋದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT