ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದೇ ಇಲ್ಲದೆ ಹುಟ್ಟುಹಬ್ಬ ಆಚರಿಸಿಕೊಂಡ ಪಿಗ್ಗಿ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಿಂದ ಹಾಲಿವುಡ್‌ಗೆ ಬಡ್ತಿ ಪಡೆದು ಅಲ್ಲಿ ಮಿಂಚುತ್ತಿರುವ ‘ಬೇವಾಚ್‌’ ಬೆಡಗಿ ಪ್ರಿಯಾಂಕಾ ಚೋಪ್ರಾ ತಮ್ಮ 35ನೇ ಹುಟ್ಟುಹಬ್ಬವನ್ನು ತೀರಾ ಖಾಸಗಿಯಾಗಿ ಆಚರಿಸಿಕೊಂಡು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ.

ಅಷ್ಟೇ ಅಲ್ಲ, ಯಾವುದೋ ವಿಹಾರ ತಾಣದಲ್ಲಿ ತಮ್ಮ ಸಹೋದರ ಮತ್ತು ತಾಯಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದನ್ನು ಖಚಿತಪಡಿಸಲು ಅಭಿಮಾನಿಗಳಿಗಾಗಿ ವಿಡಿಯೊ ಮತ್ತು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪಿಗ್ಗಿ ಹಂಚಿಕೊಂಡಿದ್ದಾರೆ. ತಮಗೆ ಶುಭಾಶಯ ಕೋರಿದ ಎಲ್ಲಾ ಅಭಿಮಾನಿಗಳಿಗೆ, ಆತ್ಮೀಯರಿಗೆ ಕೃತಜ್ಞತೆ ಸಲ್ಲಿಸಿ ಒಂದು ವಿಡಿಯೊವನ್ನೂ ಅವರು ಹರಿಬಿಟ್ಟಿದ್ದಾರೆ. ಪ್ರಿಯಾಂಕಾ ಪೋಸ್ಟ್‌ ಮಾಡಿರುವ ಚಿತ್ರದಲ್ಲಿ ತಾಯಿ ಮಧು ಚೋಪ್ರಾ ಮತ್ತು ಸೋದರ ಸಿದ್ದಾರ್ಥ ಚೋಪ್ರಾ ಜತೆ ಮಾದಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

35ರ ಹರೆಯದ ಪ್ರಿಯಾಂಕಾ ಹಾಲಿವುಡ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ’ಈಸ್‌ ನಾಟ್ ಇಟ್‌ ರೊಮ್ಯಾಂಟಿಕ್’ ಮತ್ತು ’ಎ ಕಿಡ್ ಲೈಕ್ ಜ್ಯಾಕ್‌’ ಹಾಲಿವುಡ್‌ ಸಿನಿಮಾ ಚಿತ್ರೀಕರಣದಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ದ ಪಿಗ್ಗಿ, ಸ್ವಲ್ಪ ವಿರಾಮ ತೆಗೆದುಕೊಂಡು ತನ್ನ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT