ಬೀಜಿಂಗ್: ಸಿಕ್ಕಿಂನ ದೋಕಲಾದಲ್ಲಿನ ಬಿಕ್ಕಟ್ಟು ಪರಿಸ್ಥಿತಿಯ ಬಳಿಕ ಸಾವಿರಾರು ಟನ್ಗಳ ಯುದ್ಧೋಪಕರಣಗಳನ್ನು ಮತ್ತು ಸೇನಾ ವಾಹನಗಳನ್ನು ಟಿಬೆಟ್ಗೆ ಚೀನಾ ಸಾಗಿಸಿದೆ ಎಂದು ಸೇನಾಪಡೆ ಹೇಳಿದೆ.

ಕಳೆದ ತಿಂಗಳಾಂತ್ಯದಲ್ಲಿ ಈ ಚಟುವಟಿಕೆ ನಡೆದಿದ್ದು, ಯುದ್ಧೋಪಕರಣಗಳನ್ನು ರಸ್ತೆ ಮತ್ತು ರೈಲಿನ ಮೂಲಕ ಸಾಗಣೆ ಮಾಡಲಾಗಿದೆ ಎಂದು ಸೇನಾಪಡೆಯ ಮುಖವಾಣಿ ಪತ್ರಿಕೆ ಹೇಳಿದೆ.

ಯುದ್ಧ ವಿಮಾನಗಳಿಗೆ ಗುರಿಯಾಗಿಸಿ ಅವನ್ನು ನಾಶಪಡಿಸುವ ಸಾಮರ್ಥ್ಯದ ಪರೀಕ್ಷೆ ಸೇರಿದಂತೆ ಸೇನಾ ಕವಾಯತನ್ನು ಟಿಬೆಟ್ನಲ್ಲಿ ನಡೆಸಿದ ಬಗ್ಗೆ ಕಳೆದ ವಾರವಷ್ಟೇ ವರದಿಯಾಗಿತ್ತು. ಈ ಬೆನ್ನಲ್ಲೇ ಈಗ ಸೇನಾ ವಾಹನ ಕಳುಹಿಸಿರುವುದು ವರದಿಯಾಗಿದೆ. ಇದು ವಿವಾದಿತ ದೋಕಲಾ ಪ್ರದೇಶದ ಬಳಿಯೇ ಇದೆ ಎಂದು ಹೇಳಲಾಗಿದೆ.

ಜೂನ್ 16ರಂದು ಸಿಕ್ಕಿಂ ವಲಯದಲ್ಲಿ ಚೀನಾದ ಸೈನಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಭಾರತದ ಭದ್ರತಾ ಪಡೆ ತಡೆಯೊಡ್ಡಿತ್ತು. ಇದಾದ ನಂತರ ಎರಡೂ ದೇಶಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರಿದೆ.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ
ವಾಷಿಂಗ್ಟನ್: ಭಾರತ-ಚೀನಾ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಅಮೆರಿಕ ಸಲಹೆ ಮಾಡಿದೆ.

ಉಭಯ ದೇಶಗಳ ನಡುವಿನ ಘರ್ಷಣೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕ, ಭಾರತ-ಚೀನಾ ನೇರ ಮಾತುಕತೆಗೆ ಉತ್ತೇಜಿಸುವುದಾಗಿ ಹೇಳಿದೆ. ಅಮೆರಿಕ ಚೀನಾ-ಭಾರತದ ನಡುವೆ ಉಂಟಾಗಿರುವ ವಿವಾದದ ಬಗ್ಗೆ ಕಾಳಜಿ ಹೊಂದಿದೆ ಎಂದು ಅಮೆರಿಕದ ಸರ್ಕಾರಿ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.