ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೇಲೆ ದಾಳಿಗೆ ಪಾಕ್‌, ಚೀನಾ ಸಿದ್ಧತೆ

ಟಿಬೆಟ್‌ ಸ್ವಾತಂತ್ರ್ಯಕ್ಕೆ ಬೆಂಬಲ ಕೊಡಿ: ಮುಲಾಯಂ ಸಲಹೆ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನೆರೆಯ ಪಾಕಿಸ್ತಾನದ ಜೊತೆಗೂಡಿ ಭಾರತದ ಮೇಲೆ ದಾಳಿ ನಡೆಸಲು ಚೀನಾ ಸನ್ನದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್  ಅವರು ಎಚ್ಚರಿಕೆ ನೀಡಿದ್ದಾರೆ.

‘ಭಾರತದ ನಿಜವಾದ ಶತ್ರುರಾಷ್ಟ್ರ ಚೀನಾವೇ ಹೊರತು ಪಾಕಿಸ್ತಾನವಲ್ಲ. ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಅಪಾಯ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಒಂದು ವೇಳೆ ಚೀನಾ ಆಕ್ರಮಣ ಮಾಡಿದರೆ ಅದನ್ನು ಎದುರಿಸಲು ಸರ್ಕಾರ ಯಾವ ರೀತಿಯ ಸಿದ್ಧತೆ ನಡೆಸಿದೆ ಎಂಬ ಮಾಹಿತಿಯನ್ನು ಸಂಸತ್ತಿಗೆ ನೀಡಬೇಕು ಎಂದು ಮುಲಾಯಂ ಒತ್ತಾಯಿಸಿದರು.

ಭಾರತ–ಚೀನಾ ಗಡಿ ದೋಕಲಾದಲ್ಲಿ ಉದ್ಭವಿಸಿದ ತ್ವೇಷಮಯ ವಾತಾವರಣ ಕುರಿತು ಬುಧವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೈನಿಕರು ಪಾಕಿಸ್ತಾನ ಸೇನೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.

ಆ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಸೈನಿಕರು ರಸ್ತೆ ನಿರ್ಮಿಸುತ್ತಿದ್ದಾರೆ. ಇದನ್ನು ಭಾರತ ರಾಜತಾಂತ್ರಿಕ ಹಂತದಲ್ಲಿ  ಬಲವಾಗಿ ವಿರೋಧಿಸಬೇಕು ಎಂದು ಅವರು ಸಲಹೆ ಮಾಡಿದರು.

ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿಯೇ ಪಾಕಿಸ್ತಾನದಲ್ಲಿ ಚೀನಾ ಅಣ್ವಸ್ತ್ರಗಳನ್ನು ಸಂಗ್ರಹಿಸಿ ಇಟ್ಟಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

‘ಈ ಬಗ್ಗೆ ಹಲವು ವರ್ಷಗಳಿಂದಲೂ ನಾನು  ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೇನೆ.  ನನಗಿಂತ ಹೆಚ್ಚು ಮಾಹಿತಿ ಗುಪ್ತಚರ ಇಲಾಖೆಯ ಬಳಿ ಇದೆ. ಆದರೆ, ಈ ವರೆಗೂ ಸರ್ಕಾರ ಏನು ಮಾಡಿದೆ’ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

*
ಭಾರತದ ನಿಜವಾದ ಶತ್ರು ರಾಷ್ಟ್ರ ಚೀನಾವೇ ಹೊರತು ಪಾಕಿಸ್ತಾನವಲ್ಲ. ಪಾಕಿಸ್ತಾನ ನಮಗೆ ಯಾವುದೇ ಹಾನಿ ಮಾಡುವುದಿಲ್ಲ.
ಮುಲಾಯಂ ಸಿಂಗ್‌ ಯಾದವ್‌,
ಸಮಾಜವಾದಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT