ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಯ ಕಲ್ಲು ಚಪ್ಪಡಿಗಳೇ ನಾಪತ್ತೆಯಾಗುತ್ತಿವೆ!

Last Updated 19 ಜುಲೈ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಸರಘಟ್ಟ ಮುಖ್ಯ ರಸ್ತೆಯ ಬೋನ್‌ವೀಲ್‌ನಲ್ಲಿನ ಎರಡು ವಾಟರ್‌ವಾಲ್ವ್‌ ಚೇಂಬರ್‌ ಸುತ್ತಲೂ ಹಾಕಿದ್ದ ಕಲ್ಲು ಚಪ್ಪಡಿಗಳನ್ನು ಕೆಲವರು ರಾಜಾರೋಷವಾಗಿ ಎತ್ತಿಕೊಂಡು ಹೋಗುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಕಲ್ಲುಗಳಿಗೆ ಮಾರ್ಕ್ ಮಾಡಿ, ಅಲ್ಲೇ ಒಡೆದು ಮನೆಗಳಿಗೆ ಸಾಗಿಸುತ್ತಿದ್ದಾರೆ. ಈ ಕಲ್ಲುಗಳು ಉಪಯೋಗಕ್ಕೆ ಬರದಿದ್ದರೆ, ಜಲಮಂಡಳಿ ಅವುಗಳನ್ನು ಹರಾಜು ಹಾಕಬೇಕು. ಹೀಗೆ ಸಾರ್ವಜನಿಕರ ಸ್ವತ್ತನ್ನು ತೆಗೆದುಕೊಂಡು ಹೋಗಲು ಬಿಡುವುದು ಎಷ್ಟು ಸರಿ’ ಎಂದು ಬೋನ್‌ವೀಲ್ ನಿವಾಸಿ ಸಂತೋಷ ಪ್ರಶ್ನಿಸಿದರು.

‘ಬೋನ್‌ವೀಲ್‌ ಆವರಣದಲ್ಲಿ ಜಲಮಂಡಳಿ ಕಚೇರಿ ಇದೆ. ಜನರು ಕಲ್ಲುಗಳನ್ನು ತೆಗೆದುಕೊಂಡು ಹೋಗುವುದು ತಿಳಿದಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT