ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ ಫಲಿತಾಂಶ: 60,683 ಮತಗಳೊಂದಿಗೆ ರಾಮನಾಥ ಕೋವಿಂದ್‌ ಮುನ್ನಡೆ

Last Updated 20 ಜುಲೈ 2017, 8:57 IST
ಅಕ್ಷರ ಗಾತ್ರ

ನವದೆಹಲಿ: ಬೆಳಿಗ್ಗೆ 11ರಿಂದ ಆರಂಭಗೊಂಡ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ 60,683 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ರಾಜ್ಯಾವಾರು ಅಕ್ಷರ ಕ್ರಮದಲ್ಲಿ ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರದ ಮತಗಳ ಎಣಿಕೆಯಿಂದ ಮೊದಲುಗೊಂಡಿದೆ. ಈ ರಾಜ್ಯಗಳ ಮತ ಎಣಿಕೆ ನಂತರ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್‌ 22,941 ಮತ ಹಾಗೂ ರಾಮನಾಥ ಕೋವಿಂದ್‌ 60,683 ಮತಗಳನ್ನು ಪಡೆದಿರುವುದಾಗಿ ಅಧಿಕಾರಿ ಅನೂಪ್‌ ಮಿಶ್ರಾ ತಿಳಿಸಿರುವುದಾಗಿ ವರದಿಯಾಗಿದೆ.

‘ಅತ್ಯಂತ ವಿಶ್ವಾಸ, ನಂಬಿಕೆ ಹಾಗೂ ಭರವಸೆಯೊಂದಿಗೆ 14ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ಮೀರಾ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಅಭ್ಯರ್ಥಿಗಳ ನಡುವೆ 37,742 ಮತಗಳ ಅಂತವಿದೆ. ಒಟ್ಟು ಎಂಟು ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದ್ದು ಸಂಜೆಯ ಹೊತ್ತಿಗೆ ಅಂತಿಮ ಫಲಿತಾಂಶ ಹೊರಬೀಳಲಿದೆ. ಜುಲೈ 17ರಂದು ರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT