ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರ್ಬಲರ ಶ್ರೇಯೋಭಿವೃದ್ಧಿಗೆ ಶ್ರಮ’

ಲಯನ್ಸ್ ಕ್ಲಬ್‌ನಿಂದ ರೋಗಿಗಳಿಗೆ 13ನೇ ಅನ್ನದಾಸೋಹ
Last Updated 20 ಜುಲೈ 2017, 11:34 IST
ಅಕ್ಷರ ಗಾತ್ರ

ಮೂಡಲಗಿ: ಸಮಾಜದಲ್ಲಿ ಸಾಕಷ್ಟು ಸಂಘ ಸಂಸ್ಥೆ ಕಾರ್ಯಮಾಡುತ್ತಿದ್ದು, ಆದರೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಸಮಾಜದ ತುಳಿತಕ್ಕೆ ಒಳಪಟ್ಟ   ದುರ್ಬಲ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಶ್ರೇಯೋಬಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ಪುರಸಭಾ ಮುಖ್ಯಾಧಿಕಾರಿ ಬಿ.ಬಿ.ಗೊರೊಶಿ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಲಯನ್ಸ  ಕ್ಲಬ್ ಪರಿವಾರದವರು ರೋಗಿಗಳಿಗೆ ಏರ್ಪಡಿಸಿದ್ದ 13ನೇ ವಾರದ ಅನ್ನದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ದಾನಕ್ಕಿಂತಲು ಅನ್ನದಾನ ಶ್ರೇಷ್ಠವಾಗಿದ್ದು ಇಂತಹ ಹಲವಾರು ಕಾರ್ಯದಿಂದ ಲಯನ್ಸ್ ಕ್ಲಬ್  ಸಮಾಜದಲ್ಲಿ ಮಾದರಿ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಅನ್ನದಾಸೋಹಿ ಲಯನ್ಸ್ ಕ್ಲಬ್ ಅಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿದರು.

ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಸ್.ಮದಬಾವಿ, ಡಾ.ವತ್ಸಲಾ ಗೋನಿ, ಡಾ.ಅಂಗಡಿ, ಡಾ.ಮಂಗೇಶ್, ಲಯನ್ಸ್‌ ಕ್ಲಬ್ ಸದಸ್ಯರಾದ ಬಿ.ಸಿ. ಪಾಟೀಲ, ವಿಶಾಲ ಶೀಲವಂತ, ಸುರೇಶ ನಾವಿ, ವೆಂಕಟೇಶ ಸೋನವಾಲ್ಕರ, ಮಲ್ಲಿನಾಥ ಶೆಟ್ಟಿ ಇದ್ದರು.

450ಕ್ಕೂ ಹೆಚ್ಚು ಒಳ ಮತ್ತು ಹೋರ ರೋಗಿಗಳಿಗೆ ದಾಸೋಹ ಮಾಡಲಾಯಿತು.

ಕಾರ್ಯದರ್ಶಿ ಸಂಜಯ ಮೊಕಾಶಿ ನಿರೂಪಿಸಿದರು. ಖಜಾಂಚಿ ಶಿವಾನಂದ ಗಾಡವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT