ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ರಕ್ಷಿಸುವ ಬದಲು ಫೋಟೊ ಕ್ಲಿಕ್ಕಿಸಿದರು!

Last Updated 21 ಜುಲೈ 2017, 10:48 IST
ಅಕ್ಷರ ಗಾತ್ರ

ಪುಣೆ: ರಸ್ತೆ ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ರಕ್ಷಿಸುವ ಬದಲು ಅಲ್ಲಿದ್ದ ಜನರು ಫೋಟೊ ಕ್ಲಿಕ್ಕಿಸಿದರು, ವಿಡಿಯೊ ರೆಕಾರ್ಡ್ ಮಾಡಿದರು! 

ಬುಧವಾರ ಸಂಜೆ ಇಲ್ಲಿನ ಇಂದ್ರಯಾಣಿ ಕಾರ್ನರ್‍‍‌ನಲ್ಲಿ 25ರ ಹರೆಯದ ಐಟಿ ಇಂಜಿನಿಯರ್‍ ಸತೀಶ್ ಪ್ರಭಾಕರ್ ಮೆಟೆ ಎಂಬವರ ಬೈಕ್‍ಗೆ ವಾಹನವೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತ ಸ್ಥಳದಲ್ಲಿ ಸತೀಶ್ ಸುಮಾರು 25ರಿಂದ 30 ನಿಮಿಷಗಳ ಕಾಲ ಬಿದ್ದು ಒದ್ದಾಡಿದ್ದರೂ ಅಲ್ಲಿದ್ದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ರಸ್ತೆ ಬದಿಯಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಜನರು ಸತೀಶ್ ಅವರು ಒದ್ದಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು.

ಆ ವೇಳೆ ಆ ದಾರಿಯಾಗಿ ಬಂದಿದ್ದ ಡಾ.ಕೀರ್ತಿರಾಜ್ ಕೇಟ್ ಎಂಬ ದಂತ ವೈದ್ಯರು ಸತೀಶ್ ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಗೆ ಕರೆ ತರುವ ಹೊತ್ತಿಗೆ ಸತೀಶ್ ಕೊನೆಯುಸಿರೆಳೆದಿದ್ದರು.

ಮೋಶಿ ನಿವಾಸಿಯಾದ ಸತೀಶ್ ತಮ್ಮ ಗೆಳೆಯರನ್ನು ಭೇಟಿ ಮಾಡಿ ಸಂಜೆ 6.30ಕ್ಕೆ ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಸತೀಶ್ ಅವರ ಬೈಕಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದಿರುವ ವಾಹನದ ಮಾಹಿತಿ ಈವರೆಗೆ ಪತ್ತೆಯಾಗಿಲ್ಲ. ಅಪಘಾತದ ವೇಳೆ ಅಲ್ಲಿ ಕೆಲವು ಜನರು ನಿಂತಿದ್ದರೂ ಅವರಿಗೆ ಡಿಕ್ಕಿ ಹೊಡಿದಿರುವ ವಾಹನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗಂಭೀರ ಗಾಯಗೊಂಡಿದ್ದ ಸತೀಶ್ ಅವರನ್ನು ಯಶವಂತರಾವ್ ಚೌಹಾಣ್ ಮೆಮೊರಿಯಲ್ ಹಾಸ್ಪಿಟಲ್‍ಗೆ ಕರೆತರಲಾಗಿತ್ತು. ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಭೊಸಾರಿ ಎಂಐಡಿಸಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಭೀಮ್ ರಾವ್ ಶಿಂಗಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT