ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

173 ಆತ್ಮಹತ್ಯಾ ಬಾಂಬರ್‌ಗಳ ಪಟ್ಟಿ ಬಿಡುಗಡೆ

ಸಿರಿಯಾ, ಇರಾಕ್ ದಾಳಿ ವೇಳೆ ಇಂಟರ್‌ಪೋಲ್‌ನಿಂದ ಮಾಹಿತಿ ಸಂಗ್ರಹ
Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಲಿಯಾನ್‌: 173 ಮಂದಿ ಶಂಕಿತ ಇಸ್ಲಾಮಿಕ್‌ ಸ್ಟೇಟ್ಸ್‌ (ಐಎಸ್‌) ಆತ್ಮಹತ್ಯಾ ಬಾಂಬರ್‌ಗಳ ಪಟ್ಟಿಯನ್ನು ಇಂಟರ್‌ಪೋಲ್‌ ಬಿಡುಗಡೆ ಮಾಡಿದೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಐಎಸ್‌ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಆತ್ಮಹತ್ಯಾ ಬಾಂಬರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಈ ಆತ್ಮಹತ್ಯಾ ಬಾಂಬರ್‌ಗಳು ಯುರೋಪ್‌ನಲ್ಲಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಇಂಟರ್‌ಪೋಲ್‌ ಹೇಳಿದೆ ಎಂದು ‘ಗಾರ್ಡಿಯನ್‌’ ವರದಿ ಮಾಡಿದೆ.

ಸಿರಿಯಾ ಮತ್ತು ಇರಾಕ್‌ನಲ್ಲಿ ಐಎಸ್‌ ಉಗ್ರರು ನಡೆಸಿದ ದಾಳಿಗಳ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ 173 ಮಂದಿಯ ಪಟ್ಟಿಯನ್ನು ತಯಾರಿಸಲಾಗಿದೆ.ಮೇ 27ರಂದು ಇಂಟರ್‌ಪೋಲ್‌ನ ಪ್ರಧಾನ ಕಾರ್ಯದರ್ಶಿ ಈ ಶಂಕಿತ ಬಾಂಬರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹೆಚ್ಚು ಹಾನಿ ಉಂಟು ಮಾಡುವಂತೆ ಐಎಸ್‌ ಆತ್ಮಹತ್ಯಾ ಬಾಂಬರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಸುಧಾರಿತ ಸ್ಫೋಟಕಗಳ ಮೂಲಕ ಹೆಚ್ಚು ಜನರನ್ನು ಕೊಲ್ಲುವಂತೆ ಈ ಬಾಂಬರ್‌ಗಳಿಗೆ ತರಬೇತಿ ನೀಡಲಾಗಿದೆ. ಈ ಬಾಂಬರ್‌ಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಸಂಚರಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಂಟರ್‌ಪೋಲ್‌ ಎಚ್ಚರಿಸಿದೆ.

‘ಭಯೋತ್ಪಾದಕ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಪರಾಧಿಗಳ ಪಟ್ಟಿಯನ್ನು ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ’ ಎಂದು ಇಂಟರ್‌ಪೋಲ್‌ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT