ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆಗೆ ಹರಿದುಬಂದ ಭಕ್ತಸಾಗರ

Last Updated 23 ಜುಲೈ 2017, 6:24 IST
ಅಕ್ಷರ ಗಾತ್ರ

ಯಾದಗಿರಿ: ವಿಶ್ವಾರಾಧ್ಯ ಮಠದ ಪರಂಪರಾ ಪಾದಯಾತ್ರೆ ಶನಿವಾರ ಹೆಡಗಿಮದ್ರಾ ಗ್ರಾಮ ತಲುಪಿದೆ. ಬೆಳಿಗ್ಗೆ ಸನ್ನತಿಯ ಚಂದ್ರಕಲಾ ಪರಮೇಶ್ವರಿಯ ದರ್ಶನ ಪಡೆದ ಗಂಗಾಧರ ಸ್ವಾಮೀಜಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ಜು.21ರಂದು ಆರಂಭವಾದ ಪಾದಯಾತ್ರೆ ಕನಗಾನಹಳ್ಳಿ, ಉಳುವಂಡಗೇರಾ ಗ್ರಾಮ ಬನ್ನೆಟ್ಟಿ ಮಾರ್ಗವಾಗಿ ಹೊರಟು, ತಳಕ ಗ್ರಾಮವನ್ನು ತಲುಪಿತು. ಆ ಗ್ರಾಮದ ಭಕ್ತರು ಬಾಜಾ ಭಜಂತ್ರಿಗಳೊಂದಿಗೆ ಪಾದಯಾತ್ರೆಯನ್ನು ಸ್ವಾಗತಿಸಿದರು. ಶನಿವಾರ ಹೆಡಗಿಮದ್ರಾ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.

ಶಾಂತ ಶಿವಯೋಗಿ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ‘ಅಕ್ಕರೆಯಿಂದ ಹೊಲವನ್ನು ಉತ್ತುವ ರೈತ ತಾನು ಬಿತ್ತುವ ಬೆಳೆ ಸಮೃದ್ಧವಾಗಿ ಬಂದರೆ ಅವನ ಬದುಕು ಹಸನಾಗುತ್ತದೆ.

ಈ ಬಾರಿ ಚೆನ್ನಾಗಿ ಮಳೆ ಬರುವುದರ ಮೂಲಕ ರೈತನ ಬೆಳೆ ಹುಲುಸಾಗಿ ಬೆಳೆದು ಅವನ ಬದುಕು ಹಸನಾಗಲಿ’ ಎಂದು ಹಾರೈಸಿದರು. ನಂತರ ಭೀಮರಡ್ಡಿಗೌಡ ಅರಿಕೇರಾ  ಮತ್ತು ರಾಮರೆಡ್ಡಿಗೌಡ ಸಾಹುಕಾರ ಅವರು ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿ ಶಾಂತ ಶೀವಯೋಗಿ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT