ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್‌: ಇಂಗ್ಲೆಂಡ್‌ ಚಾಂಪಿಯನ್‌

Last Updated 23 ಜುಲೈ 2017, 16:47 IST
ಅಕ್ಷರ ಗಾತ್ರ

ಲಂಡನ್‌: ಲಾರ್ಡ್ಸ್‌ ಅಂಗಳದಲ್ಲಿ ಭಾನುವಾರ ನಡೆದ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ 9 ರನ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಬ್ಯಾಟಿಂಗ್‌ ಆರಿಸಿಕೊಂಡಿತ್ತು. ನಿಗದಿತ ಓವರ್‌ಗಳಲ್ಲಿ ಇಂಗ್ಲೆಂಡ್‌ 7 ವಿಕೆಟ್‌ಗಳ ನಷ್ಟಕ್ಕೆ 228 ರನ್‌ ಪೇರಿಸಿತ್ತು.

229 ರನ್‌ ಗೆಲುವಿನ ಗುರಿಯ ಬೆನ್ನತ್ತಿದ ಮಿಥಾಲಿ ರಾಜ್‌ ಪಡೆ 48.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು  219 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಭಾರತದ ಪೂನಮ್‌ ರಾವತ್‌ 86 ರನ್‌, ಹರ್ಮನ್‌ಪ್ರೀತ್‌ ಕೌರ್‌ 51 ರನ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT