ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಗೆ ಹುಟ್ಟುಹಬ್ಬಕ್ಕೆ ಕೊಡುಗೆ ವಿವಾದದಲ್ಲಿ ಜಿಂಬಾಬ್ವೆ ಅಧ್ಯಕ್ಷ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಹರಾರೆ (ಜಿಂಬಾಬ್ವೆ): ದೇಶ ಆರ್ಥಿಕ  ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ, ಅಧ್ಯಕ್ಷ ರಾಬರ್ಟ್‌ ಮುಗಾಬೆ ಅವರು ತಮ್ಮ ಅತ್ತಿಗೆಯ   ಹುಟ್ಟುಹಬ್ಬಕ್ಕೆ 60 ಸಾವಿರ ಡಾಲರ್‌ (ಸುಮಾರು 38.64 ಲಕ್ಷ) ಹಣವನ್ನು ಕೊಡುಗೆಯಾಗಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಗಾಬೆ ಹಾಗೂ ಅವರ ಪತ್ನಿ ಗ್ರೇಸ್‌ ಅವರು ಜೂನಿಯರ್‌ ಗುಂಬೊಚುಮಾ ಅವರ 60ನೇ ಹುಟ್ಟುಹಬ್ಬಕ್ಕೆ ಈ ಕಾಣಿಕೆ ನೀಡಿದ್ದಾರೆ. ಗುಂಬೊಚುಮಾ ಅವರು ಗ್ರೇಸ್‌ ಅವರ ಅಕ್ಕ. ತಮ್ಮ ಕುಟುಂಬದ ಮಕ್ಕಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ಈ ಉಡುಗೊರೆ ನೀಡಿದ್ದಾಗಿ ದಂಪತಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಿಂಬಾಂಬ್ವೆಯ ಆರ್ಥಿಕತೆ ಕುಸಿಯುತ್ತಿದ್ದು, ಅನೇಕ ಬ್ಯಾಂಕ್‌ಗಳು ತೀವ್ರ ಹಣದ ಕೊರತೆ ಎದುರಿಸುತ್ತಿವೆ. ಜನ ದಿನಕ್ಕೆ ಗರಿಷ್ಠ 20 ಡಾಲರ್‌ (₹ 1300) ಮಾತ್ರ ಪಡೆಯಬಹುದಾಗಿದ್ದು, ಅದಕ್ಕಾಗಿ ಅವರು ಬ್ಯಾಂಕ್‌ಗಳ ಮುಂದೆ  ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT