ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಲಂಕಾ ತಂಡ: ಮಲಿಂದಾ ಪುಷ್ಪಕುಮಾರಗೆ ಸ್ಥಾನ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಗಾಲ್‌ (ಪಿಟಿಐ): ದೇಶಿ ಟೂರ್ನಿಗಳಲ್ಲಿ ಮಿಂಚಿದ್ದ ಎಡಗೈ ಸ್ಪಿನ್ನರ್‌ ಮಲಿಂದಾ ಪುಷ್ಪಕುಮಾರ ಅವರು ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಆಲ್‌ರೌಂಡರ್‌ ಧನಂಜಯ ಡಿಸಿಲ್ವ ಮತ್ತು ವೇಗಿ ನುವಾನ್‌ ಪ್ರದೀಪ್‌ ಅವರಿಗೂ ಅವಕಾಶ ನೀಡಿದೆ. 30 ವರ್ಷದ ಪುಷ್ಪಕುಮಾರ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19.85ರ ಸರಾಸರಿಯಲ್ಲಿ 558 ವಿಕೆಟ್‌ ಉರುಳಿಸಿ ದ್ದಾರೆ. ಈ ಸಾಧನೆಯ ಆಧಾರದಲ್ಲಿ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಲಭ್ಯವಾಗಿದೆ.
ಪುಷ್ಪಕುಮಾರ ಅವರು ಎಡಗೈ ಸ್ಪಿನ್ನರ್‌ ಲಕ್ಷಣ್‌ ಸಂದಕನ್‌ ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನಾಯಕ ದಿನೇಶ್‌ ಚಾಂಡಿಮಲ್‌ ಅವರು ನ್ಯುಮೋನಿಯಾದಿಂದ ಬಳಲು ತ್ತಿದ್ದು, ಮೊದಲ ಟೆಸ್ಟ್‌ಗೆ ಅಲಭ್ಯರಾಗಿ ದ್ದಾರೆ. ಹೀಗಾಗಿ ಧನಂಜಯ ಡಿಸಿಲ್ವಾಗೆ ಅವಕಾಶ ಒಲಿದಿದೆ. ಹೋದ ವರ್ಷ ಆಸ್ಟ್ರೇಲಿಯಾ ವಿರುದ್ಧ ದ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್‌ ಮಾದರಿಗೆ ಅಡಿ ಇಟ್ಟಿದ್ದ ವಿಶ್ವ ಫರ್ನಾಂಡೊ, ಸುರಂಗ ಲಕ್ಮಲ್‌ ಮತ್ತು ಲಾಹಿರು ಕುಮಾರ ಅವರೂ ತಂಡ ದಲ್ಲಿದ್ದಾರೆ. ಸ್ಪಿನ್ನರ್‌ ರಂಗನಾ ಹೆರಾತ್‌ ಅವರು ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ರಥಮ ಟೆಸ್ಟ್‌ ಪಂದ್ಯ ಜುಲೈ 26ರಿಂದ 30ರವರೆಗೆ ಗಾಲ್‌ ಅಂತರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಆಗಸ್ಟ್‌ 3ರಿಂದ ಆಗಸ್ಟ್‌ 7ರವರೆಗೆ ಕೊಲಂಬೊದ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಜರುಗಲಿದ್ದು, ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಆಗಸ್ಟ್‌ 12ರಿಂದ ಆಗಸ್ಟ್‌ 16ರವರೆಗೆ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಆಯೋಜನೆಯಾಗಿದೆ.

ಈ ಸರಣಿಯ ಬಳಿಕ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಜರುಗಲಿದ್ದು, ಅದಾದ ನಂತರ ಎರಡೂ ತಂಡಗಳು ಏಕೈಕ ಟಿ–20 ಪಂದ್ಯ ಆಡಲಿವೆ. ಈ ಪಂದ್ಯ ಸೆಪ್ಟೆಂಬರ್‌ 6ರಂದು ನಿಗದಿಯಾಗಿದೆ.

ತಂಡ ಇಂತಿದೆ: ರಂಗನಾ ಹೆರಾತ್‌ (ನಾಯಕ), ಉಪುಲ್‌ ತರಂಗ, ದಿಮುತ್‌ ಕರುಣಾರತ್ನೆ, ಕುಶಾಲ್‌ ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ಅಸೆಲಾ ಗುಣರತ್ನೆ,  ನಿರೋಷನ್‌ ಡಿಕ್ವೆಲ್ಲಾ, ಧನಂಜಯ ಡಿಸಿಲ್ವ, ಧನುಷ್ಕಾ ಗುಣತಿಲಕ, ದಿಲ್ರುವಾನ ಪೆರೇರಾ, ಸುರಂಗ ಲಕ್ಷ್ಮಲ್‌, ಲಾಹಿರು ಕುಮಾರ, ವಿಶ್ವ ಫರ್ನಾಂಡೊ, ಮಲಿಂದಾ ಪುಷ್ಪಕುಮಾರ ಮತ್ತು ನುವಾನ್‌ ಪ್ರದೀಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT