ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಂದ ₹13,000 ಕೋಟಿ ಮೌಲ್ಯದ ಷೇರು ಮರು ಖರೀದಿ: ಇನ್ಫೊಸಿಸ್‌

Last Updated 19 ಆಗಸ್ಟ್ 2017, 11:32 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿ ದೊಡ್ಡ ಐಟಿ ಕಂಪನಿ ಇನ್ಫೊಸಿಸ್‌ ₹13,000 ಕೋಟಿ ಮೌಲ್ಯದ ಷೇರುಗಳನ್ನು ಹೂಡಿಕೆದಾರರಿಂದ ಮರು ಖರೀದಿಸಲು ನಿರ್ಧರಿಸಿದೆ.

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಶನಿವಾರ ನಡೆಸಲಾದ ಮೊದಲ ಸಭೆಯಲ್ಲಿ ಇನ್ಫೊಸಿಸ್‌ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಸಂಸ್ಥೆಯ 36 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಷೇರುದಾರರಿಂದ ಷೇರುಗಳನ್ನು ಮರು ಖರೀದಿಸಲಾಗುತ್ತಿದೆ. ಸಂಸ್ಥೆಯ ಸಹ ಸ್ಥಾಪಕರು ಮತ್ತು ಮಾಜಿ ಉನ್ನತ ಅಧಿಕಾರಿಗಳು, ಹೆಚ್ಚುವರಿ ಹಣವನ್ನು ಷೇರುದಾರರಿಗೆ ಮರಳಿಸಬೇಕು ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು.

ಒಟ್ಟು 11,30,43,478 ಇಕ್ವಿಟಿ ಷೇರುಗಳನ್ನು ಖರೀದಿಸಲಿದ್ದು, ಪ್ರತಿ ಷೇರಿಗೆ ₹1,150 ನಿಗದಿ ಪಡಿಸಿದೆ. ಷೇರು ಹಿಂಪಡೆಯುವ ಕೊಡುಗೆಯು ಹೂಡಿಕೆಯ ಒಟ್ಟು ಪಾವತಿಯ ಶೇ.20.51ರಷ್ಟು ಇರುವುದಾಗಿ ಸಂಸ್ಥೆಯು ಭಾರತೀಯ ಷೇರು ಮಾರುಕಟ್ಟೆ ಬಿಎಸ್‌ಇಗೆ ತಿಳಿಸಿದೆ.

ಶುಕ್ರವಾರ ದಿನದ ಅಂತ್ಯಕ್ಕೆ ಪ್ರತಿ ಷೇರಿನ ದರ ₹923.10ಕ್ಕೆ ಮುಕ್ತಾಯಗೊಂಡಿತ್ತು. ಇನ್ಫೊಸಿಸ್‌ ಪ್ರತಿ ಷೇರಿಗೆ ₹1,150 ನೀಡುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT