ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಲಿದೆ ಬಿಗ್‌ಬೆನ್‌ ಐರ್ಟನ್‌ ದೀಪ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಇಂಗ್ಲೆಂಡ್‌ನ ಐತಿಹಾಸಿಕ ಕಟ್ಟಡ ಎಲಿಜಬೆತ್‌ ಟವರ್‌ನ ತುದಿಯಲ್ಲಿರುವ ಬಿಗ್‌ಬೆನ್‌ ಐರ್ಟನ್‌ ದೀಪವನ್ನು 70 ವರ್ಷಗಳ ಬಳಿಕ ನಂದಿಸಲಾಗುತ್ತಿದೆ.

1885ರಲ್ಲಿ ನಿರ್ಮಿಸಲಾದ ಎಲಿಜಬೆತ್‌ ಟವರ್‌ನ ಬಿಗ್‌ಬೆನ್‌ ಐರ್ಟನ್‌ ದೀಪವನ್ನು ಎರಡು ವಿಶ್ವ ಯುದ್ಧದ ಸಮಯದಲ್ಲಿ ಮಾತ್ರ ನಂದಿಸಲಾಗಿತ್ತು. ಇದೀಗ ದುರಸ್ತಿ ಕಾರ್ಯದ ಸಲುವಾಗಿ 2021ರ ವರೆಗೆ ದೀಪ ಆರಿಸಲಾಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.



ಈ ದೀಪವನ್ನು ರಾಣಿ ವಿಕ್ಟೋರಿಯಾ ಅವರ ಕೋರಿಕೆ ಮೇರೆಗೆ ಅಳವಡಿಸಲಾಗಿತ್ತು. ಬಕಿಂಗ್‌ಹ್ಯಾಮ್‌ ಅರಮನೆಯಿಂದಲೂ ಈ ದೀಪವನ್ನು ಕಾಣಬಹುದಾಗಿತ್ತು.

ರಾಜಕಾರಣಿ ಹಾಗೂ 1869ರಿಂದ 1873ರ ವರೆಗೆ  ಕಾಮಗಾರಿ ಇಲಾಖೆಯ ಮೊದಲ ಆಯುಕ್ತರಾಗಿದ್ದ  ಆಕ್ಟನ್‌ ಸ್ಮೀ ಐರ್ಟನ್‌ ಹೆಸರನ್ನು ಈ ದೀಪಕ್ಕೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT