ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕಗಳಲ್ಲಿ ಸ್ಥಳೀಯ ಇತಿಹಾಸ ಸೇರ್ಪಡೆಯಾಗಲಿ: ಡಾ.ಜಗದೀಶ ಶೆಟ್ಟಿ

Last Updated 22 ಆಗಸ್ಟ್ 2017, 9:29 IST
ಅಕ್ಷರ ಗಾತ್ರ

ಬ್ರಹ್ಮಾವರ: ತುಳುನಾಡಿನ ಸಂಸ್ಕೃತಿ ಯನ್ನು ಅರ್ಥಮಾಡಿಕೊಂಡು ಇಲ್ಲಿಯ ಇತಿಹಾಸವನ್ನು ಅಧ್ಯಯನ ಮಾಡಲು ಪಠ್ಯ ಪುಸ್ತಕಗಳಲ್ಲಿ ಸ್ಥಳಿಯ ಇತಿಹಾಸವನ್ನು ಸೇರಿಸಿಕೊಳ್ಳಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಶೆಟ್ಟಿ ಹೇಳಿದರು.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ಇತಿಹಾಸ ವಿಭಾಗ ಶುಕ್ರವಾರ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯುಜಿಸಿ ಪ್ರಾಯೋಜಿತ ‘ಸ್ಥಳೀಯ ಇತಿಹಾಸ ಇತ್ತೀಚಿನ ಬೆಳವಣಿಗೆಗಳು’ ಒಂದು ದಿನದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ತುಳುನಾಡು ಕಾಸರಗೋಡಿ ನಿಂದ ಹೊನ್ನಾವರದವರೆಗೆ ಪಸರಿಸಿತ್ತು. ವಿಜಯನಗರ, ಹೊಯ್ಸಳ ರಾಜವಂಶ ಹೊರತುಪಡಿಸಿ ಬೇರಾವ ರಾಜಮನೆತನದ ಆಳ್ವಿಕೆಗೆ ತುಳುನಾಡು ಒಳಪಟ್ಟಿರಲಿಲ್ಲ ಎಂದ ಅವರು, ಹಲವು ರಾಜವಂಶಗಳು ಇಲ್ಲಿ ಆಳಿದ್ದು, ಅವರು ಜೈನರಾಗಿದ್ದು, ಶೈವ ದೇವಾಲಯಗಳನ್ನು ನಿರ್ಮಿಸಿದ್ದರು. ಅತ್ಯಂತ ಪ್ರಾಚೀನ ದೇವಾಲಯಗಳಾದ ಉದ್ಯಾವರದ ಶಂಭು ಕಲ್ಲು ದೇವಾಲಯ, ಸೂರಾಲಿನ ಮಹಾಲಿಂಗೇಶ್ವರ ದೇವಾಲಯಗಳ ಶೈಲಿ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಿದೆ ಮತ್ತು ತನ್ನ ವಿಶಿಷ್ಟವಾದ ಸಂಸ್ಕೃತಿಯನ್ನು ಇಂದಿಗೂ ಬೆಳೆಸಿ ಉಳಿಸಿಕೊಂಡಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರಾಮದಾಸ್‌ ಪ್ರಭು ಅವರು ‘ಪ್ರಾಚೀನ ತುಳುನಾಡಿನಲ್ಲಿ ರಾಜ್ಯಗಳ ಉದಯ’, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸುರೇಶ್ ರೈ ‘ತುಳುನಾಡಿನಲ್ಲಿ ವಸಾಹತುಶಾಹಿಗಳ ಪ್ರಭಾವ’ ವಿಷಯದ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ. ಸ್ಯಾಮುಯೆಲ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಗುರುಮೂರ್ತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಜ್ಯೋತಿ ವಂದಿಸಿದರು. ವಿದ್ಯಾರ್ಥಿನಿ ಅಂಜು ಮೇರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT