ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನಿಸ್‌ ದಾಖಲೆ ಸೇರಿದ 153 ಕೆ.ಜಿ. ತೂಕದ ಸಮೋಸಾ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲಂಡನ್‌:  ಇಲ್ಲಿನ ಮಸೀದಿಯೊಂದರಲ್ಲಿ ತಯಾರಿಸಿದ 153 ಕೆ.ಜಿ. ತೂಕದ ಬೃಹತ್‌ ಸಮೋಸಾ ಗಿನ್ನಿಸ್‌ ದಾಖಲೆಗೆ ಸೇರಿದೆ.

12 ಸದಸ್ಯರ ತಂಡ 15 ಗಂಟೆಗಳ ಅವಧಿಯಲ್ಲಿ ಸಮೋಸಾ ತಯಾರಿಸಿದೆ. ಗಿನ್ನಿಸ್‌ ವಿಶ್ವ ದಾಖಲೆಗೆ ಸಂಬಂಧಿಸಿದ ಅಧಿಕಾರಿಗಳು ಸಮೋಸಾ ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ನಿರ್ಗತಿಕರಿಗೆ ಈ ಸಮೋಸಾ ವಿತರಿಸಲಾಯಿತು.

ಈ ಮೊದಲು 2012ರಲ್ಲಿ ಬ್ರಾಡ್‌ಫೋರ್ಡ್‌ ಕಾಲೇಜಿನ ವಿದ್ಯಾರ್ಥಿಗಳು 110.8 ಕೆ.ಜಿ. ಸಮೋಸಾ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

‘ಮುಸ್ಲಿಂ ಸಮುದಾಯದ ಸೇವಾ ಮನೋಭಾವ ಮತ್ತು ದಾನದ ಬಗ್ಗೆ ತಿಳಿಸಲು ಈ ಸಮೋಸಾ ತಯಾರಿಸಲಾಯಿತು’ ಎಂದು ಮಸೀದಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT