ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕಳ್ಳರ ಸೆರೆ, 158 ಬೈಕ್ ಜಪ್ತಿ

Last Updated 23 ಆಗಸ್ಟ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ತಿಂಗಳ ಅವಧಿಯಲ್ಲಿ 60 ವಾಹನಗಳ್ಳರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು, 158 ಬೈಕ್‌ಗಳು ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ವಾಹನಗಳನ್ನು ಅವುಗಳ ವಾರಸುದಾರಿಗೆ ವಿತರಿಸಿದರು.

‘ಬಂಧಿತರಲ್ಲಿ ಕೆಲವರು ಸುಲಭವಾಗಿ ಹಣ ಸಂಪಾದಿಸಲು ಬೈಕ್‌ಗಳನ್ನು ಕಳವು ಮಾಡಿದ್ದರೆ, ಮತ್ತೆ ಕೆಲವರು ವ್ಹೀಲಿಂಗ್ ಹಾಗೂ ಡ್ರ್ಯಾಗ್‌ರೇಸ್‌ ಮಾಡುವ ಉದ್ದೇಶಕ್ಕಾಗಿಯೇ ಕದ್ದಿದ್ದಾರೆ. ಸಾರ್ವಜನಿಕರು ಸಹ ಕೆಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ತಮ್ಮ ವಾಹನಗಳನ್ನು ರಕ್ಷಿಸಿಕೊಳ್ಳಬೇಕು. ರಾತ್ರಿ ವೇಳೆ ರಸ್ತೆ ಬದಿಯೇ ಬೈಕ್‌ಗಳನ್ನು ನಿಲ್ಲಿಸುತ್ತಿರುವುದು ಕಳ್ಳರಿಗೆ ವರದಾನವಾಗುತ್ತಿದೆ’ ಎಂದು ಅವರು ಹೇಳಿದರು.

ವ್ಹೀಲಿಂಗ್ ಮಾಡುವುದಕ್ಕಾಗಿಯೇ ಬೈಕ್ ಕದಿಯುತ್ತಿದ್ದ ರಂಜಿತ್ ಅಲಿಯಾಸ್ ವಂದಳ್ ಹಾಗೂ ಮಾರಿಮುತ್ತು ಮುನಿಸ್ವಾಮಿ ಎಂಬುವರು ಜೆ.ಪಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬೈಕ್‌ಗಳನ್ನು ಕದ್ದು ಮೋಜಿನ ಸುತ್ತಾಟಕ್ಕೆ ಹೋಗುತ್ತಿದ್ದ ಇವರು, ನಂತರ ಎಲ್ಲೆಂದರಲ್ಲಿ ಅವುಗಳನ್ನು ಬಿಟ್ಟು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅದೇ ರೀತಿ ಪ್ರೇಯಸಿಯನ್ನು ಓಲೈಸಲು ದುಬಾರಿ ಮೌಲ್ಯದ ಬೈಕ್‌ಗಳನ್ನು ಕದಿಯುತ್ತಿದ್ದ ವಾಸೀಂ ಎಂಬಾತನನ್ನು ಬಂಧಿಸಿರುವ ಕೆ.ಜಿ.ನಗರ ಪೊಲೀಸರು, 16 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.  ಪ್ರೇಯಸಿಯನ್ನು ಭೇಟಿಯಾಗಲು ದಿನಕ್ಕೊಂದು ಬೈಕ್‌ನಲ್ಲಿ ಹೋಗುತ್ತಿದ್ದ ವಾಸೀಂ, ಅದರಲ್ಲೇ ಆಕೆಯನ್ನು ಮೋಜಿನ ಸುತ್ತಾಟಕ್ಕೂ ಕರೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT