ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿ ಚಿದಂಬರಂ ವಿಚಾರಣೆ ನಡೆಸಿದ ಸಿಬಿಐ

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡನೇ ಬಾರಿಗೆ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿತು.

ತಮ್ಮ ತಂದೆ ಪಿ ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ, ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಒಡೆತನದ ಐಎನ್‌ಎಕ್ಸ್‌ ಮಾಧ್ಯಮ ಸಮೂಹಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ (ಎಫ್‌ಐಪಿಬಿ) ನಿರಾಕ್ಷೇಪಣಾ ಪತ್ರ ಕೊಡಿಸಿದ ಆರೋಪ ಕಾರ್ತಿ ಅವರ ಮೇಲಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಅವರನ್ನು ವಿಚಾರಣೆಗೆ ಒಳಪಡಿಸಿತು.

ಕಾರ್ತಿ ಅವರು ಐಎನ್‌ಎಕ್ಸ್‌ ಮಾಧ್ಯಮದ ಮೇಲೆ ‘ಪರೋಕ್ಷವಾಗಿ ನಿಯಂತ್ರಣ’ ಹೊಂದಿದ್ದರು. ಕಾರ್ತಿ ಜತೆಗೆ ಪಾಲುದಾರರಾಗಿರುವ ಭಾಸ್ಕರ್ ರಾಮನ್, ರವಿ ವಿಶ್ವನಾಥನ್ ಹಾಗೂ ಮೋಹನನ್ ರಾಕೇಶ್‌ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಆಗಸ್ಟ್ 23ರಂದು ಸಿಬಿಐ ಕಾರ್ತಿ ಅವರ ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT