ರಾಜ ರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ದಾಳಿ

ದುಷ್ಕರ್ಮಿಗಳ ಗುಂಡೇಟಿಗೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಬಲಿ

ನಗರದ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಬೆಂಗಳೂರು:  ಹಿರಿಯ ಪತ್ರಕರ್ತೆ ಹಾಗೂ ಸಾಹಿತಿ ಗೌರಿ ಲಂಕೇಶ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ರಾತ್ರಿ 8 ಸುಮಾರಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ನಗರದ ರಾಜರಾಜೇಶ್ವರಿ ನಗರದಲ್ಲಿರುವ  ಅವರ ಮನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ. 

ಗೌರಿ ಲಂಕೇಶ್ ಅವರು ಮನೆಯ ಬಾಗಿಲ ಬೀಗ ತೆಗೆಯುತ್ತಿದ್ದ ವೇಳೆ  ದುಷ್ಕರ್ಮಿಗಳು ಎದೆ ಹಾಗೂ ಹಣೆಯ ಭಾಗಕ್ಕೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.  ಆಗ ಗೌರಿ ಲಂಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸಂಬಂಧಿಕರು, ಪೊಲೀಸರು ನೂರಾರು ಮಂದಿ ಜಮಾಯಿಸಿದ್ದಾರೆ. ಅಲ್ಲದೇ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Comments
ಈ ವಿಭಾಗದಿಂದ ಇನ್ನಷ್ಟು
ಇವಿಎಂ ಬಳಕೆಗೆ ಚುನಾವಣಾ ಆಯೋಗದ ಹಠ ಸರಿಯಲ್ಲ: ದೇವೇಗೌಡ

ಹಾಸನದಲ್ಲಿ ಸುದ್ದಿಗೋಷ್ಠಿ
ಇವಿಎಂ ಬಳಕೆಗೆ ಚುನಾವಣಾ ಆಯೋಗದ ಹಠ ಸರಿಯಲ್ಲ: ದೇವೇಗೌಡ

17 Mar, 2018
ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ: ಸಚಿವ ರಾಯರಡ್ಡಿ ಪ್ರಶ್ನೆ

ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ
ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ: ಸಚಿವ ರಾಯರಡ್ಡಿ ಪ್ರಶ್ನೆ

17 Mar, 2018
‘ಪುಣ್ಯ, ನಲಪಾಡ್ ಪ್ರಕರಣದಲ್ಲೂ ಬಿಜೆಪಿ ಕೈವಾಡದ ಆರೋಪ ಮಾಡಿಲ್ಲ!’ ಸುರೇಶ್‌ ಕುಮಾರ್ ತಿರುಗೇಟು

ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ
‘ಪುಣ್ಯ, ನಲಪಾಡ್ ಪ್ರಕರಣದಲ್ಲೂ ಬಿಜೆಪಿ ಕೈವಾಡದ ಆರೋಪ ಮಾಡಿಲ್ಲ!’ ಸುರೇಶ್‌ ಕುಮಾರ್ ತಿರುಗೇಟು

17 Mar, 2018
ಕನ್ನಡಕ್ಕೆ ಪ್ರಾಧಾನ್ಯತೆ ನೀಡುವುದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿ ಹೇಗೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ನಾಡಧ್ವಜದ ಬಗ್ಗೆ ಪ್ರಸ್ತಾಪ
ಕನ್ನಡಕ್ಕೆ ಪ್ರಾಧಾನ್ಯತೆ ನೀಡುವುದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿ ಹೇಗೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

17 Mar, 2018
ಶಿರೂರು ಶ್ರೀ ವಿರುದ್ಧ ಕ್ರಮಕ್ಕೆ ಒತ್ತಾಯ

ಉಡುಪಿ
ಶಿರೂರು ಶ್ರೀ ವಿರುದ್ಧ ಕ್ರಮಕ್ಕೆ ಒತ್ತಾಯ

17 Mar, 2018