ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ; ನೆಲಕಚ್ಚಿದ ಹತ್ತಿ, ಕಬ್ಬು

Last Updated 6 ಸೆಪ್ಟೆಂಬರ್ 2017, 6:43 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿ ನಾದ್ಯಂತ ಸೋಮವಾರ ಉತ್ತಮ ಮಳೆಯಾಗಿದ್ದು, ಕೆಲ ರೈತರು ಸಂತಸಗೊಂಡಿದ್ದರೆ, ಹಲವರು ನಿರಾಸೆ ಗೊಂಡಿದ್ದಾರೆ. ಹೈರಿಗೆ ಗ್ರಾಮದಲ್ಲಿ ಗರಿಷ್ಠ 3 ಮಿಲಿ ಮೀಟರ್ ಮಳೆಯಾಗಿದೆ.

ಹತ್ತಿ ಬೆಳೆಗಾರರ ಸಂಕಷ್ಟ: ತಾಲೂಕಿನಲ್ಲಿ 29.650 ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಆದರೆ, ಧಾರಾಕಾರ ಮಳೆಗೆ ಬಹುಪಾಲು ಬೆಳೆ ನೆಲಕಚ್ಚಿದೆ. ಈ ವರ್ಷದಲ್ಲಿ 31 ಸಾವಿರ ಹೆಕ್ಟರ್ ಹತ್ತಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 29,650 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಒಂದೇ ಬಾರಿಗೆ ಹತ್ತಿ ಬೆಳೆ ಕಟಾವಿಗೆ ಬಂದಿದ್ದರಿಂದ ಕೂಲಿ ಕಾರ್ಮಿಕರ ಸಮಸ್ಯೆ ಉಂಟಾಗಿತ್ತು.

ಕೂಲಿಕಾರರು ದೊರೆತ ಬಳಿಕ ಬೆಳೆ ಕಟಾವು ಮಾಡಲು ಕೆಲ ರೈತ ನಿರ್ಧಿಸಿ ಗಿಡದಲ್ಲಿಯೇ ಹತ್ತಿ ಬಿಟ್ಟಿದ್ದರು. ಆದರೆ, ಸೋಮವಾರ ಸುರಿದ ಭಾರಿ ಮಳೆಗೆ ಕೈಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.

ಕೆಲ ರೈತರಲ್ಲಿ ಹರ್ಷ: ಈಗ ಬೆಳೆ ಬೆಳೆಯಲು ಸಿದ್ಧತೆ ನಡೆಸಿರುವ ರೈತರಲ್ಲಿ ಈ ಮಳೆ ಹರ್ಷ ತಂದಿದೆ. ಕಬಿನಿ ಜಲಾಶಯದ ಎಡದಂಡೆ ನಾಲೆಯಲ್ಲಿ ನೀರು ಹರಿಸಿರುವುದರಿಂದ ಈ ಭಾಗದ ಸುಮಾರು 2 ಸಾವಿರ ಹೆಕ್ಟರ್ ಪ್ರದೇಶದ ರೈತರು ಭತ್ತದ ಪೈರು ನಾಟಿಗೆ ಸಿದ್ಧವಾಗಿದ್ದಾರೆ. ಈ ಬಾರಿ 6,300 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯವ ಗುರಿ ಹೊಂದಲಾಗಿತ್ತು.

ಕಬಿನಿಯಿಂದ ನೀರು ಬಿಡುವುದು ವಿಳಂಬವಾದ್ದರಿಂದ ಬಿತ್ತನೆ ಪ್ರಮಾಣ 2 ಸಾವಿರ ಹೆಕ್ಟೆರ್ ಪ್ರದೇಶಕ್ಕೆ ಕುಸಿದಿದೆ. ಈ ವರ್ಷ ಭತ್ತ ಬೆಳೆಯಬಾರದು ಎಂದು ಸರ್ಕಾರವೇ ತಾಕೀತು ಮಾಡಿದ್ದರೂ ರೈತರ ಒತ್ತಾಯದ ಮೇರೆಗೆ ಸುಮಾರು 400 ಕ್ವಿಂಟಲ್ ಬಿತ್ತನೆ ಭತ್ತ ವಿತರಿಸಲಾಗಿದೆ.

ಈಗ ಭತ್ತದ ಪೈರು ನಾಟಿ ಮಾಡಿದರೆ ಮಳೆಗಾಲಕ್ಕೆ ಸಿಲುಕುವುದ ರಿಂದ ಇಳುವರಿಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ರೈತರಿಗೆ ಮನವರಿಕೆ ಮಾಡಲಾಗಿದೆ. ಆದರೂ ಹಳ್ಳದ ಗದ್ದೆಯ ರೈತರು ಬೇರೆ ಬೆಳೆ ಬೆಳೆಯಲು ಸಾಧ್ಯವಾಗದಿದ್ದರಿಂದ ಅನಿವಾರ್ಯವಾಗಿ ಭತ್ತ ಬಿತ್ತನೆ ಮಾಡಲು ಮುಂದಾಗಿದ್ದಾರೆ. ರಾಗಿ, ಹುರುಳಿ ಹಾಗೂ ಮುಸುಕಿನ ಜೋಳ ಬಿತ್ತಲು ಮಾಡಲು ಇದು ಸಕಾಲವಾಗಿದೆ ಎಂದು ಕೃಷಿ ತಾಂತ್ರಿಕ ಅಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.

ಕಳೆದ ಜನವರಿಯಿಂದ ಸೆಪ್ಟೆಂಬರ್ 4ರವರೆಗೆ 689 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, 561 ಮಿಲಿ ಮೀಟರ್ ದಾಖಲಾಗಿದೆ. ಅಂದರೆ ಶೇ 81ರಷ್ಟು ಮಳೆ ಆಗಿದೆ. ಮೇ, ಜೂನ್, ಜುಲೈನಲ್ಲಿ ಶೇ 60 ರಷ್ಟು ಕಡಿಮೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 160 ಮಿಲಿ ಮೀಟರ್ ಮಳೆಯಾಗಬೇಕಿತ್ತು, ಆದರೆ, 113 ಮಿಲಿ ಮೀಟರ್ ಬಿದ್ದಿದೆ.  ಪ್ಟೆಂಬರ್ ತಿಂಗಳಲ್ಲಿ 3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ನಿಗದಿಗಿಂತ ಹೆಚ್ಚು ಅಂದರೆ 38 ಮಿ.ಮೀ ಮಳೆಯಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಧಾರಾಕಾರ ಮಳೆ
ಮೈಸೂರು: ಜಿಲ್ಲೆಯಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿ 8.30ರವರೆಗೆ 150 ಮಿ.ಮೀ ಮಳೆಯಾಗಿದೆ. ಹುಣಸೂರಿನಲ್ಲಿ 122, ಕೆ.ಆರ್.ನಗರದಲ್ಲಿ 112, ಪಿರಿಯಾಪಟ್ಟಣ 108, ನಂಜನಗೂಡು 93 ಮೀ.ಮೀ ಮಳೆಯಾಗಿದೆ. ಮಳೆಯಿಂದ ಕೆಪಿಎಲ್ ಪಂದ್ಯವೂ ರದ್ದಾಗಿದ್ದರಿಂದ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT