ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿ, ಅಮಿತ್ ಷಾ ಬ್ಲ್ಯಾಕ್‌ಮೇಲ್‌ ರಾಜಕಾರಣ: ಸಚಿವ ಸಂತೋಷ್ ಲಾಡ್‌ ಆರೋಪ

Last Updated 7 ಸೆಪ್ಟೆಂಬರ್ 2017, 8:59 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಆದಾಯ ತೆರಿಗೆ ಇಲಾಖೆಯಿಂದ ರೇಡ್‌ ಮಾಡಿಸುವ ಮೂಲಕ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಆರೋಪಿಸಿದರು.

ಇದೇ 12ರಂದು ಬಳ್ಳಾರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 10.30ಕ್ಕೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ದೇಶದಲ್ಲಿ ಜಿಡಿಪಿ ಕುಸಿತಕ್ಕೆ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಪ್ರಮುಖ ಕಾರಣ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ, ವಿದೇಶಿ ಬ್ಯಾಂಕ್‌ ಗಳಲ್ಲಿನ ಕಪ್ಪು ಹಣ ತರುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತಿಗೆ ತಪ್ಪಿದೆ. ಕೆಲಸಕ್ಕೆ ಬಾರದ ವಿಷಯಗಳ ಕುರಿತಂತೆ ಟ್ವೀಟ್‌ ಮಾಡುವ ಮೋದಿ, ದೇಶದ ಸಾವಿರಾರು ರೈತರ ಆತ್ಮಹತ್ಯೆ ಕುರಿತು ಇದುವರೆಗೂ ಎಲ್ಲಿಯೂ ಪ್ರಸ್ತಾಪ ಮಾಡದಿರುವುದು ದುರಂತ. ದೇಶದ ಜನರನ್ನು ಕೇವಲ ಬಣ್ಣದ ಮಾತುಗಳಿಂದ ಮರಳು ಮಾಡು ತ್ತಿದ್ದಾರೆ. ಸರ್ಕಾರದ ಹಣದಲ್ಲಿ ಕೇವಲ ಪ್ರಪಂಚ ಪರ್ಯಟನೆ ಮಾಡುವಲ್ಲಿ ನಿರತ ರಾಗಿದ್ದಾರೆ’ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ತಂಟೆಗೆ ಬಂದರೆ ಹುಷಾರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು ಇದ್ದಂತೆ, ಅವರ ತಂಟೆಗೆ ಅಮಿತ್ ಷಾ ಬಂದರೆ  ಉಳಿಗಾಲ ಇಲ್ಲ. ಯಡಿಯೂರಪ್ಪ ಅವ ರಿಗೆ ಈಗ ದಲಿತರು ನೆನಪಾಗುತ್ತಿದ್ದಾರೆ. ಮಠಾಧೀಶರಿಗೆ ವಿಧಾನಸಭೆ    ಚುನಾವಣೆಯಲ್ಲಿ ಟಿಕೆಟ್‌ ನೀಡುವ ಆಲೋಚನೆ ಮಾಡುವ ಮೂಲಕ ಸಂವಿಧಾನ ವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷಮೆ ಯಾಚಿಸಿದ ಸಚಿವ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಚಾತುರ್ಯದಿಂ ದಾಗಿ ಸಭೆಯ ಬ್ಯಾನರ್‌ನಲ್ಲಿ ಕೆಲವರ ಭಾವಚಿತ್ರಗಳು ಕಾಣೆಯಾಗಿರುವ ಕುರಿತಂತೆ ಮಾಜಿ ಶಾಸಕ ಸಿರಾಜ್‌ ಶೇಖ್ ಅವರ ಗೈರು ಹಾಜರಿಯಲ್ಲಿ ಸಚಿವರು ಕ್ಷಮೆಯಾಚಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಬಿ.ವಿ.ಶಿವಯೋಗಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಎ.ಕೊಟ್ರೇಶ್, ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ತಳವಾರ ರಾಘವೇಂದ್ರ, ಮುಖಂಡ ರಾದ ಹೆಗ್ಡಾಳ್ ರಾಮಣ್ಣ, ಮುಂಡ್ರಿಗಿ ನಾಗರಾಜ, ಸಿ.ಬಸವರಾಜ, ಎಚ್‌.ಸತ್ಯ ನಾರಾಯಣ, ರೋಗಾಣಿ ಪ್ರಕಾಶ್‌, ನೆಲ್ಲು ಇಸ್ಮಾಯಿಲ್ ಸಾಹೇಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT