ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆ ಅಲೆಯೋ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಮುದ್ರದ ಅಲೆಗಳು ಈಗ ಹುಬ್ಬು ಮತ್ತು ತುಟಿಯ ಫ್ಯಾಷನ್‌ಗೂ ಲಗ್ಗೆ ಇಟ್ಟಿವೆ. ದಿನಕ್ಕೊಂದು ವಿನ್ಯಾಸಗಳು ಬರುತ್ತಲೇ ಇರುತ್ತವೆ. ಅದರಲ್ಲಿಯೂ ಹುಬ್ಬು ಮತ್ತು ತುಟಿಯ ವಿನ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯ. ಈಗಾಗಲೇ ಫೆದರ್‌ ಬ್ರೊ, ಬ್ರೊ ಕರ್ವಿಂಗ್‌ ಹೀಗೆ ಹಲವು ವಿನ್ಯಾಸಗಳು ಸದ್ದು ಮಾಡಿತ್ತು.

ಸದ್ಯ ‘ವೇವಿ ಐಬ್ರೊ, ಲಿಪ್‌ಸ್ಟಿಕ್‌’ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಹುಬ್ಬು, ತುಟಿಯ ಮೇಲೆ ಅಲೆಗಳು ಸಾಗುತ್ತಿರುವ ಹಾಗೆ ಚಿತ್ತಾರ ಮಾಡಿಕೊಳ್ಳುವುದು ಇಂದಿನ ಟ್ರೆಂಡ್‌. ಹಾವು ಹರಿದಂತೆ ಕಾಣುವ ಹುಬ್ಬು, ಸಮುದ್ರದ ಅಲೆಗಳ ಪ್ರತಿಬಿಂಬದಂತೆ ಕಾಣುವ ತುಟಿಗಳು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವವರ ಮನ ಗೆದ್ದಿದೆ.

ಫ್ಯಾಷನ್‌ ಪ್ರಪಂಚದ ಅರಿವು ಬೆಳೆಸಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣ ತಡಕಾಡುವವರಿಗೆ ಈ ಫ್ಯಾಷನ್‌ ಕುತೂಹಲ ಹುಟ್ಟಿಸಿದೆ. ಇದು ಅಮೆರಿಕದ ಬ್ಯಾಟಿ ಬ್ಲಾಗರ್‌ ಥಮಾಂಗ್‌ ಸೃಷ್ಟಿಸಿರುವ ಹೊಸ ಫ್ಯಾಷನ್‌.

ಆಧುನಿಕ ಉಡುಪಿಗೆ ಮಾತ್ರವೇ ಹೊಂದುವ ಈ ಫ್ಯಾಷನ್‌ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಹ ಲುಕ್‌ ಇದು, ಜೊತೆಗೆ ರೂಪದರ್ಶಿಯರಿಗೆ ಸುಂದರ ನೋಟ ನೀಡುತ್ತದೆ ಎನ್ನುವ ಅಭಿಪ್ರಾಯವೂ ಇದೆ.

ಈ ಪೋಸ್ಟ್‌ ಹಾಕಿದ ಮೇಲೆ ಕೆಲವು ಪ್ರಸಾಧನ ಕಲಾವಿದರು ಇದೇ ಶೈಲಿಯನ್ನು ಅನುಕರಿಸಿ, ಬಣ್ಣ ಮತ್ತು ಚಿತ್ತಾರದಲ್ಲಿ ವಿಭಿನ್ನತೆಯನ್ನು ಸೃಷ್ಟಿಸಿದ್ದಾರೆ. ಹಲವು ಬಣ್ಣದ ಐಶ್ಯಾಡೊಗಳನ್ನು ಬಳಸಿ ಇದೇ ಶೈಲಿಗೆ ವಿಭಿನ್ನ ನೋಟ ನೀಡಲಾಗಿದೆ. ಆದರೆ ಒಂದೇ ಬಣ್ಣದಿಂದ ಈ ರೀತಿಯ ವಿನ್ಯಾಸ ಮೂಡಿಸಿದರೆ ಸರಳ ಸುಂದರವಾಗಿ ಕಾಣುತ್ತದೆ ಎಂದು ಫ್ಯಾಷನ್‌ ಪ್ರಿಯರು ಸಲಹೆ ನೀಡಿದ್ದಾರೆ. ಕೆಲವರು ಹೊಸ ಫ್ಯಾಷನ್‌ ತುಂಬಾ ತಮಾಷೆಯಾಗಿದೆ ಎಂದು ಅಣಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT